ಮನರಂಜನೆ

ಕೊರೋನಾ ವಾರಿಯರ್ಸ್ ಗೌರವಾರ್ಥವಾಗಿ ಚಿತ್ರಕಲೆ ರಚಿಸಿದ ಆರಾಧ್ಯ ಬಚ್ಚನ್ : ಮಗಳ ಚಿತ್ರಕಲೆ ಫೋಟೋ ಹಂಚಿಕೊಂಡ ನಟಿ ಐಶ್ವರ್ಯಾ ರೈ ಬಚ್ಚನ್  

ದೇಶ(ನವದೆಹಲಿ)ಮೇ.4:-   ಕೊರೋನಾ ವೈರಸ್ ಹಾವಳಿಯಿಂದಾಗಿ  ದೇಶ ಮತ್ತು ಪ್ರಪಂಚ ತ್ತರಿಸಿದೆ. ಈ ಬಿಕ್ಕಟ್ಟಿನಿಂದಾಗಿ ಅನೇಕ ದೇಶಗಳು ಲಾಕ್ ಡೌನ್ ನಲ್ಲಿವೆ. ವೈರಸ್ ವಿರುದ್ಧ   ವೈದ್ಯರು, ದಾದಿಯರು, ಪೊಲೀಸ್, ಸ್ವೀಪರ್‌ಗಳು ಮತ್ತು ಕೆಲವು ಸರ್ಕಾರಿ ನೌಕರರು ಸೇರಿದಂತೆ ಕೆಲವು ಕರೋನಾ ವಾರಿಯರ್‌ಗಳು ಹಗಲಿರುಳೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ.  ಕೊರೋನಾ ವಾರಿಯರ್ಸ್ ಗಳನ್ನು ದೇಶಾದ್ಯಂತ ಗೌರವಿಸಲಾಗುತ್ತಿದೆ. ಬಾಲಿವುಡ್ ಬಿಗ್ ಬಿ  ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ಮತ್ತು ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ಸುಂದರವಾದ ವರ್ಣಚಿತ್ರ ರಚಿಸುವ ಮೂಲಕ ಕೊರೋನಾ ವಾರಿಯರ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

ಆರಾಧ್ಯ ಬಚ್ಚನ್ ಅವರ ಈ ಸುಂದರವಾದ ವರ್ಣಚಿತ್ರವನ್ನು ಅವರ ತಾಯಿ ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.  ‘ನನ್ನ ಮಗಳು ಆರಾಧ್ಯ ಕಡೆಯಿಂದ ಕೃತಜ್ಞತೆ ಮತ್ತು ಪ್ರೀತಿ’ ಎಂದು ಬರೆದಿದ್ದಾರೆ. ಕೊರೋನಾ ವಾರಿಯರ್ಸ್ ಗೌರವಾರ್ಥವಾಗಿ ಆರಾಧ್ಯರಿಂದ ರಚಿತಗೊಂಡ ಈ ವರ್ಣಚಿತ್ರದಲ್ಲಿ    ವೈದ್ಯಕೀಯ ಸಿಬ್ಬಂದಿ, ಮಾಧ್ಯಮ, ಪೊಲೀಸ್, ಸೇನೆ, ಸ್ವೀಪರ್ ಗಳು ಮತ್ತು ಶಿಕ್ಷಕರಿಗೆ ಈ ಕಷ್ಟದ ಸಮಯದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ನಟಿ ಐಶ್ವರ್ಯಾ ನಂತರ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ  ಈ ವರ್ಣಚಿತ್ರವನ್ನು ಹಂಚಿಕೊಂಡಿದ್ದು,  ನಿನಗೆ ಅರ್ಥವಾಗಿದೆ. ನೀನು ವ್ಯಕ್ತಪಡಿಸಿದ್ದೀಯಾ..8 ವರ್ಷದ ಆರಾಧ್ಯ ನಿಜವಾಗಿಯೂ ಪ್ರತಿಭಾವಂತಳು ಎಂದು  ಬರೆದುಕೊಂಡಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: