
ಮೈಸೂರು
ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ದಿನಸಿ ಕಿಟ್ ವಿತರಣೆ
ಮೈಸೂರು,ಮೇ.5:- ನಾಯ್ಡು ನಗರದ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಇಂದು ದೇವಸ್ಥಾನ ಆವರಣದಲ್ಲಿ ದಿನಸಿ ಕಿಟ್ ವಿತರಿಸಲಾಯಿತು.
ಸುಮಾರು 300 ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.
ಸಮಿತಿ ಅಧ್ಯಕ್ಷರಾದ ನಾಗರಾಜು, ಮಹದೇವ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಜಿ ಗಿರಿಧರ್, ನಗರಪಾಲಿಕೆ ಸದಸ್ಯರಾದ ಸಲೀಂ, ಮಾಜಿ ಎಸ್ಸಿ ಮೋರ್ಚಾ ಅಧ್ಯಕ್ಷರಾದ ನಾಗರಾಜು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)