ಮೈಸೂರು

ತಂತ್ರಜ್ಞಾನದ ಅರಿವು ಎಲ್ಲರಲ್ಲಿಯೂ ಇರಬೇಕು : ಹೆಚ್.ವಿ.ರಾಜೀವ್

ಭಾರತೀಯ ಜನತಾಪಕ್ಷದ ಮೈಸೂರು ನಗರದ ಪದಾಧಿಕಾರಿಗಳಿಗೆ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲಾಯಿತು.

ಕುವೆಂಪುನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಆವರಣದಲ್ಲಿ ನಡೆದ ಮಾಹಿತಿ ಸಭೆಯಲ್ಲಿ ಪಾಲ್ಗೊಂಡ ಹೆಚ್.ವಿ.ರಾಜೀವ್ ಮಾತನಾಡಿ ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಜಗತ್ತಿನ ಆಗುಹೋಗುಗಳ ಕ್ಷಣಕ್ಷಣದ ಮಾಹಿತಿಗಳು ಇಂದು ತಂತ್ರಜ್ಞಾನದಿಂದ ಲಭ್ಯವಾಗುತ್ತಿವೆ. ಮಾಧ್ಯಮಗಳು ಕೇವಲ ಮೂವತ್ತು ಸಾವಿರ ಜನರನ್ನು ತಲುಪಿದರೆ ಸಾಮಾಜಿಕ ಜಾಲತಾಣಗಳು ಲಕ್ಷಾಂತರ ಜನರನ್ನು ಕ್ಷಣಾರ್ಧದಲ್ಲಿ ತಲುಪಲಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಸ್ವಇಚ್ಛೆಯಿಂದ ಸಮಾಜದ ಹಿತವನ್ನು ತಿಳಿಸುವ, ಅಥವಾ ಅನ್ಯಾಯವನ್ನು ವಿರೋಧಿಸುವ ಕುರಿತಂತೆ ಏನನ್ನಾದರೂ ಬರೆಯಬಹುದು. ಅದರಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ. ಬೇಕಿದ್ದಲ್ಲಿ ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಬಿಡಬಹುದು ಎಂದರು.

ಮೋದಿಯನ್ನು ಭಾರತದ ನಿಷ್ಕಳಂಕ ಪ್ರಧಾನಿ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕವೇ ಇಡೀ ವಿಶ್ವವೇ ನೋಡುತ್ತಿದೆ. ಭಾರತ ಡಿಜಿಟಲೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ತಂತ್ರಜ್ಞಾನದ ಕುರಿತು ಅರಿವಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: