ದೇಶಪ್ರಮುಖ ಸುದ್ದಿ

ವ್ಯಾಟ್ ಹೆಚ್ಚಿಸಿದ ದೆಹಲಿ ಸರ್ಕಾರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ,ಮೇ 5- ದೆಹಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಹೆಚ್ಚಿಸಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಕಂಡಿವೆ.

ಇದಕ್ಕೂ ಮೊದಲು ಮದ್ಯಕ್ಕೆ ಶೇ. 70ರಷ್ಟು ಕೊರೊನಾ ತೆರಿಗೆ ವಿಧಿಸಿದ್ದ ದೆಹಲಿ ಸರ್ಕಾರ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಹೆಚ್ಚಿಸಿದೆ.

ಪೆಟ್ರೋಲ್ ಬೆಲೆ 1.67 ರೂಪಾಯಿ ಹೆಚ್ಚಳವಾದರೆ, ಡೀಸೆಲ್ ಬೆಲೆಯಂತೂ ಲೀಟರ್​ಗೆ 7.1 ರೂಪಾಯಿಯಷ್ಟು ಹೆಚ್ಚಳವಾಗಿದೆ. ವ್ಯಾಟ್ ಹೇರಿಕೆಯಿಂದಾಗಿ ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 71.26 ರೂಪಾಯಿ ತಲುಪಿದೆ. 62.29 ರೂಪಾಯಿ ಇದ್ದ ಡೀಸೆಲ್ ಬೆಲೆ 69.39 ರೂಪಾಯಿ ಮುಟ್ಟಿದೆ.

ಇದು ದೆಹಲಿಯಲ್ಲಿ ಮಾತ್ರ ವ್ಯಾಟ್ ಹೆಚ್ಚಳದಿಂದ ಆಗಿರುವ ಬದಲಾವಣೆ. ದೇಶದ ಬೇರೆಡೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 73.55 ರೂಪಾಯಿಯಲ್ಲೇ ಮುಂದುವರಿದಿದೆ. ಡೀಸೆಲ್ ಬೆಲೆ 65.96 ರೂಪಾಯಿ ಇದೆ.

ದೆಹಲಿಯಲ್ಲಿ ಈವರೆಗೂ ಬೇರೆ ನಗರಗಳಿಗೆ ಹೋಲಿಸಿದರೆ ವ್ಯಾಟ್ ತೆರಿಗೆ ಕಡಿಮೆ ಇತ್ತು. ತತ್ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೂ ಕಡಿಮೆ ಇದ್ದವು. ಈಗ ತೆರಿಗೆ ಹೆಚ್ಚಳದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. (ಎಂ.ಎನ್)

 

 

Leave a Reply

comments

Related Articles

error: