ಕರ್ನಾಟಕ

ಮಂಗಳೂರು ನಗರದಲ್ಲಿ ಕಾಡುಕೋಣ ಪ್ರತ್ಯಕ್ಷ: ಭಯಭೀತರಾದ ಜನತೆ

ಮಂಗಳೂರು,ಮೇ 5-ಇಂದು ಬೆಳಿಗ್ಗೆ ನಗರದೊಳಕ್ಕೆ ಕಾಡುಕೋಣವೊಂದು ಪ್ರವೇಶಿಸಿದ್ದು, ಜನರು ಭಯಭೀತಗೊಂಡಿದ್ದಾರೆ.

ಕುದ್ರೋಳಿಯ ವಿಶಾಲ್ ನರ್ಸಿಂಗ್ ಹೋಂ ಸಮೀಪ‌ ಕಾಡುಕೋಣ ಬೀಡುಬಿಟ್ಟಿದೆ. ಅದಕ್ಕೂ ಮುನ್ನ ಹ್ಯಾಟ್ ಹಿಲ್, ಮಣ್ಣಗುಡ್ಡ ಸೇರಿದಂತೆ ನಗರದ ಹಲವೆಡೆ ಓಡಾಡಿದೆ. ಜನವಸತಿ ಪ್ರದೇಶಗಳಲ್ಲೇ ಸುತ್ತಾಡುತ್ತಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ಜನ ಸಂಚಾರ ಮತ್ತು ವಾಹನಗಳ ಸಂಚಾರ ಕಡಿಮೆ ಇದೆ. ಹೀಗಾಗಿ ಕಾಡುಕೋಣ ಅರಣ್ಯದಿಂದ ದಾಟಿಕೊಂಡು ನಗರಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಪಕ್ಕ ಬಜ್ಪೆ, ಅದ್ಯಪಾಡಿ ಅರಣ್ಯ ಪ್ರದೇಶದ ಸುತ್ತಮುತ್ತಲೂ ಕಾಡುಕೋಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು. ಅಲ್ಲಿಂದ ಬಂದಿರುವ ಸಾಧ್ಯತೆ ಇರಬಹುದೆಂದು ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: