ಮೈಸೂರು

ಸಿಎಂ ಪರಿಹಾರ ನಿಧಿಗೆ ತಾನು ಕೂಡಿಟ್ಟ 1500ರೂ.ನೀಡಿದ ಬಾಲಕ

ಮೈಸೂರು,ಮೇ.5:- ಕೊರೋನಾ ಮಹಾಮಾರಿ ಎಫೆಕ್ಟ್ ಹಿನ್ನೆಲೆಯಲ್ಲಿ ಕಳೆದ 43 ದಿನಗಳಿಂದ ಭಾರತ ಲಾಕ್ ಡೌನ್ ಆಗಿದ್ದು, ಲಾಕ್ ಡೌನ್ ನಲ್ಲಿ ಉಳ್ಳವರ ದಾನದ ನಡುವೆ ಬಾಲಕನೋರ್ವ  ಮಹತ್ ಕಾರ್ಯ‌ ಮಾಡಿದ್ದಾನೆ.

ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸಲು ಅಳಿಲು ಸೇವೆ ಮಾಡಿದ್ದು, ತಾನು ಉಳಿಸಿಟ್ಟಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾನೆ. ಕಳೆದ ಎರಡು ವರ್ಷದಿಂದ ಕೂಡಿಟ್ಟಿದ್ದ ಹಣವನ್ನು  ಪರಿಹಾರ‌ ನಿಧಿಗೆ  ನೀಡಿದ್ದು, ಶಾಸಕ ರಾಮದಾಸ್ ಅವರ ಮೂಲಕ ತಾನೂ ಕೂಡಿಟ್ಟಿದ್ದ ಹಣದ ಪೊಟ್ಟಣವನ್ನು 14ವರ್ಷದ ಬಾಲಕ  ಮೃಗಾಲಯ ಸಿಬ್ಬಂದಿಯಾದ ಎಎಲ್ ರಘು  ಅವರ ಪುತ್ರ ಪ್ರತೀಕ್ ಭಾರದ್ವಾಜ್ ನೀಡಿದ್ದಾನೆ. ಎರಡು ವರ್ಷದಿಂದ ತಾನು ಕೂಡಿಟ್ಟಿದ್ದ 1500 ರೂ.ಹಣವನ್ನು ಇಂದು ಶಾಸಕರ ಮೂಲಕ ಸಿಎಂ ಪರಿಹಾರ ನಿಧಿಗೆ ನೀಡಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: