ಮೈಸೂರು

ತೈತ್ತರಿಯೋಪನಿಷತ್ ಉಪನ್ಯಾಸ

ಮೈಸೂರಿನ ಸರಸ್ವತಿಪುರಂನ ಸರ್ಕಾರಿ ಮುದ್ರಣಾಲಯದ ಎದುರು ಇರುವ ಡಾ.ಎಸ್.ರಾಧಾಕೃಷ್ಣನ್ ಭವನದಲ್ಲಿ ತೈತ್ತರಿಯೋಪನಿಷತ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ವಿಶ್ವವಿದ್ಯಾಲಯದ ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದ ವತಿಯಿಂದ ಭಾನುವಾರ ಏರ್ಪಡಿಸಲಾದ ತೈತ್ತಿರಿಯೋಪನಿಷತ್ ಉಪನ್ಯಾಸಕ್ಕೆ ಮಹಾರಾಜ ಕಾಲೇಜಿನ ತತ್ವಶಾಸ್ತ್ರ ವಿಭಾಗದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕಿ  ಪ್ರೊ.ಹೆಚ್.ದೇವಕಿ ದೀಪಬೆಳಗುವ ಮೂಲಕ ಚಾಲನೆ ನೀಡಿದರು. 18ನೇ ಉಪನ್ಯಾಸ ಮಾಲಿಕೆ ಉಪನ್ಯಾಸ ದರ್ಶನವನ್ನು ಮಹಾರಾಜ ಕಾಲೇಜಿನ ತತ್ವಶಾಸ್ತ್ರ ವಿಭಾಗದ ವಿಶ್ರಾಂತ  ಪ್ರೊ.ವೈ.ಎಸ್.ಗೌರಮ್ಮ ನೀಡಿದರು.

ಈ ಸಂದರ್ಭ ಸಂಯೋಜಕ ಡಾ.ಸಿ.ಪಿ.ರಾಮಶೇಷ, ಪ್ರಾಧ್ಯಾಪಕ ಪ್ರೊ.ಜಿ.ಹೇಮಂತ್ ಕುಮಾರ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: