ಪ್ರಮುಖ ಸುದ್ದಿಮನರಂಜನೆ

ವಿಶ್ವ ದಾಖಲೆ ಮಾಡಿದ ‘ರಾಮಾಯಣ’ ಧಾರಾವಾಹಿ : ಸಂತೋಷ ವ್ಯಕ್ತಪಡಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್

ದೇಶ(ನವದೆಹಲಿ)ಮೇ.5:-  ರಮಾನಂದ್ ಸಾಗರ್ ಅವರ ರಾಮಾಯಣವು ಲಾಕ್ ಡೌನ್ ನಲ್ಲಿ ಪ್ರೇಕ್ಷಕರನ್ನು ರಂಜಿಸಿತು. 80 ರ ದಶಕದ ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ ಕುರಿತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ. ದೇಶದ ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಿದ್ದಕ್ಕಾಗಿ ಅವರು ದೂರದರ್ಶನಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇದರೊಂದಿಗೆ ‘ರಾಮಾಯಣ’ ಧಾರಾವಾಹಿ  ವಿಶ್ವ ದಾಖಲೆಯನ್ನು ಮಾಡಿರುವ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ.

ವೆಂಕಯ್ಯ ನಾಯ್ಡು ಅವರು ಟ್ವೀಟ್‌ನಲ್ಲಿ   “ದೂರದರ್ಶನವು ಭಾರತೀಯ ಮಹಾಕಾವ್ಯಗಳನ್ನು ಆಧರಿಸಿದ ಜನಪ್ರಿಯ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಿರುವುದು ಸ್ವಾಗತಾರ್ಹ ಮತ್ತು ಶ್ಲಾಘನೀಯ. ನಮ್ಮ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ನವ ಪೀಳಿಗೆಗೆ ಪರಿಚಯಿಸುವಲ್ಲಿ ದೂರದರ್ಶನದ ಈ ಪ್ರಯತ್ನಗಳನ್ನು ನಾನು ಅಭಿನಂದಿಸುತ್ತೇನೆ ” ಎಂದಿದ್ದಾರೆ.

“ಓಲ್ಡ್ ಈಸ್ ಗೋಲ್ಡ್.” ಹರಿ ಅನಂತ್, ಹರಿ ಕಥಾ ಅನಂತ. ದೂರದರ್ಶನ ಮರು ಪ್ರಸಾರ ಮಾಡಿದ ರಾಮಾಯಣವು ಜನಪ್ರಿಯತೆಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಮತ್ತು ಇದು ವಿಶ್ವದಲ್ಲೇ ಹೆಚ್ಚು ವೀಕ್ಷಿಸಿದ ಕಾರ್ಯಕ್ರಮವಾಗಿದೆ ಎಂದು ತಿಳಿದುಬಂದಿದೆ. # ರಾಮಾಯಣ ಎಂದು ಬರೆದಿದ್ದಾರೆ.

ರಮಾನಂದ್ ಸಾಗರ್ ಅವರ ‘ಉತ್ತರ ರಾಮಾಯಣ’ ಚಿತ್ರದ ಕೊನೆಯ ಕಂತು ಮೇ 2 ರಂದು ಪ್ರಸಾರವಾಯಿತು. ಅದರ ನಂತರ ರಾಮಾಯಣ ಇಡೀ ದಿನ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಟಿಆರ್‌ಪಿ ವಿಷಯದಲ್ಲಿ ‘ರಾಮಾಯಣ’ ಇತ್ತೀಚೆಗೆ ವಿಶ್ವ ದಾಖಲೆ ನಿರ್ಮಿಸಿದೆ. ‘ರಾಮಾಯಣ’ ಧಾರಾವಾಹಿಯನ್ನು ಏಪ್ರಿಲ್ 16 ರಂದು 7.7 ಕೋಟಿ ಜನರು ವೀಕ್ಷಿಸಿದ್ದರು, ಇದು ಇಡೀ ವಿಶ್ವದಲ್ಲೇ ಅತಿ ಹೆಚ್ಚು ಜನರು ವೀಕ್ಷಿಸಿದ ಪ್ರದರ್ಶನವಾಗಿದೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: