ದೇಶಪ್ರಮುಖ ಸುದ್ದಿ

ಮತ್ತೆ ಶೇ.50ರಷ್ಟು ಮದ್ಯದ ದೊರೆ ಹೆಚ್ಚಿಸಿದ ಆಂಧ್ರ ಪ್ರದೇಶ

ಅಮರಾವತಿ,ಮೇ 5-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯದ ದರ ಹೆಚ್ಚಾದ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರ ಮದ್ಯ ಪ್ರಿಯರಿಗೆ ಮತ್ತೆ ಶಾಕ್ ನೀಡಿದೆ.

ಸೋಮವಾರವಷ್ಟೇ ಶೇ.25ರಷ್ಟು ಮದ್ಯದ ಬೆಲೆಯನ್ನು ಹೆಚ್ಚಿಸಿದ್ದ ಸರ್ಕಾರ ಇದೀಗ ಶೇ.50ರಷ್ಟು ದರವನ್ನು ಹೆಚ್ಚಿಸಿದ್ದು, ಒಟ್ಟು ಶೇ.75ರಷ್ಟು ಮದ್ಯದ ದರ ಏರಿಸಿದೆ.

ಬೆಲೆ ಏರಿಕೆಯ ಜೊತೆ ಮದ್ಯದ ಅಂಗಡಿಗಳನ್ನು ಬೆಳಿಗ್ಗೆ 11 ಗಂಟೆಯ ಬದಲಾಗಿ ಮಧ್ಯಾಹ್ನ 12 ಗಂಟೆಯ ನಂತರ ತೆರೆಯಲು ಆಂಧ್ರ ಸರ್ಕಾರ ತೀರ್ಮಾನಿಸಿದೆ. ಆಂಧ್ರ ಪ್ರದೇಶದಲ್ಲಿ ಸಂಪೂರ್ಣ ಮದ್ಯ ವ್ಯವಹಾರ ಸರ್ಕಾರದ ನಿಯಂತ್ರಣದಲ್ಲಿದ್ದು, ರಾಜ್ಯಾದ್ಯಂತ ಮದ್ಯದ ಅಂಗಡಿಗಳನ್ನು ತೆರೆದಿದ್ದು, 3,468 ಔಟ್ಲೇಟ್ಗಳು ಆಂಧ್ರದಲ್ಲಿ ತಲೆಯೆತ್ತಿವೆ.

ಮದ್ಯದ ಅಸಾಮಾನ್ಯ ದರ ಏರಿಕೆಯ ಬಗ್ಗೆ ಕಂದಾಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ರಜತ್ಭಾರ್ಗವ್ಪ್ರತಿಕ್ರಿಯಿಸಿದ್ದು, ಮದ್ಯದಿಂದ ಜನರನ್ನು ದೂರ ಇಡಲು ಕ್ರಮ ಕೈಗೊಳ್ಳಲಾಗಿದೆ. ಅವರ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡ ಮದ್ಯದ ದರ ಹೆಚ್ಚಾಗಿದ್ದು, ಕೇಜ್ರಿವಾಲ್ಸರಕಾರ ಶೇ.70ರಷ್ಟು ವಿಶೇಷ ಕೊರೊನಾ ಶುಲ್ಕ ಎಂದು ಮದ್ಯದ ದರವನ್ನು ಹೆಚ್ಚಿಸಿದೆ. ಸರಕಾರದ ಬೊಕ್ಕಸಕ್ಕೆ ಆದಾಯವನ್ನು ತರುವಲ್ಲಿ ದರ ಹೆಚ್ಚಳದ ಕ್ರಮವನ್ನು ಸರಕಾರಗಳು ತೆಗೆದುಕೊಂಡಿದ್ದು, ಕರ್ನಾಟಕದಲ್ಲಿಯೂ ಶೇ.6ರಷ್ಟು ಮದ್ಯದ ದರ ಹೆಚ್ಚಿಸಲಾಗಿದೆ. (ಎಂ.ಎನ್)

 

Leave a Reply

comments

Related Articles

error: