ಮೈಸೂರು

ವಿದ್ಯುತ್ ಓವರ್ ಹೆಡ್ ಮಾರ್ಗ ಭೂಗತ ಕೇಬಲ್ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಪ್ರಗತಿಯಲ್ಲಿ : ಕೆ.ಎಂ.ಮುನಿಗೋಪಾಲ್ ರಾಜು

ಮೈಸೂರು.ಮೇ.5:-  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮೈಸೂರು ನಗರದಾದ್ಯಂತ ವಿದ್ಯುತ್ ಸರಬರಾಜಿಗೆ ಪ್ರಸ್ತುತ ಇರುವ ವಿದ್ಯುತ್ ಓವರ್ ಹೆಡ್ ಮಾರ್ಗವನ್ನು ಭೂಗತ ಕೇಬಲ್ ಮಾರ್ಗವನ್ನಾಗಿ ಪರಿವರ್ತಿಸುವಂತಹ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಕೆ.ಎಂ.ಮುನಿಗೋಪಾಲ್ ರಾಜು ತಿಳಿಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಈ ಸಂಬಂಧ ಮಳೆಗಾಲದಲ್ಲಿ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕಗಳಿಗೆ ಹಾನಿ ಉಂಟಾಗುವುದನ್ನು ತಡೆಗಟ್ಟಬಹುದು. ಗಾಳಿ ಮತ್ತು ಮಳೆಯಿಂದ ಉಂಟಾಗುವ ವಿದ್ಯುತ್ ಆಡಚಣೆಗಳನ್ನು ತಡೆಗಟ್ಟಿ ನಿಗಮಕ್ಕೆ ಉಂಟಾಗುವ ನಷ್ಟವನ್ನು ತಪ್ಪಿಸಬಹುದು. ಆದ್ಧರಿಂದ ಸಾರ್ವಜನಿಕರು ಮತ್ತು ಗ್ರಾಹಕರು ತಮ್ಮ ಪೂರ್ಣ ಸಹಕಾರ ನೀಡಬೇಕು ಎಂದು ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನೀಯರ್ ಕೆ.ಎಂ.ಮುನಿಗೋಪಾಲ್ ರಾಜು ಅವರು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: