ಮೈಸೂರು

ಶಾರದಾ ದೇವಿ ನಗರ, ಆಶ್ರಯ ಬಡಾವಣೆ, ಜನತಾ ನಗರ, ಸುತ್ತ ಮುತ್ತ ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಣೆ

ಮೈಸೂರು,ಮೇ.5:- ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ (ನಗರಮಂಡಲ) ಶಾರದಾ ದೇವಿ ನಗರ, ಆಶ್ರಯ ಬಡಾವಣೆ, ಜನತಾ ನಗರ, ಸುತ್ತ ಮುತ್ತ   ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಜನರಿಗೆ ಸಂಸದರಾದ   ಪ್ರತಾಪ್ ಸಿಂಹ   ಮತ್ತು ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ   ಟಿ ಎಸ್ ಶ್ರೀವತ್ಸ ಅವರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಹಾಗೂ ಕ್ಷೇತ್ರ ಅಧ್ಯಕ್ಷ ಬಿ ಎಂ ರಘುರವರ ನೇತೃತ್ವ ದಲ್ಲಿ,ನಗರ ಮಂಡಲ ವತಿಯಿಂದ  ದಿನಬಳಕೆಯ ಅವಶ್ಯಕತೆ ಇರುವ ದಿನಸಿ ಪದಾರ್ಥಗಳ ಕಿಟ್ ಗಳನ್ನು ಇಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ  ಸ್ಥಳೀಯ ನಿವಾಸಿಗಳು   ಸಂಕಷ್ಟ ಸಮಯದಲ್ಲಿ ತಮಗೆ ಸಹಾಯ ಮಾಡುತ್ತಿರುವ ಬಿಜೆಪಿಯ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.   ಕಾರ್ಯದರ್ಶಿ,ಮುಖಂಡರಾದ ರೇವಣ್ಣ,ಟಿ ಎಸ್ ರವಿಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿ   ಎಚ್ ಜಿ ರಾಜಮಣಿ,  ಈರೇಗೌಡ,ಕಾರ್ಯಾಲಯ  ಕಾರ್ಯದರ್ಶಿ, ಬಿ ಸಿ ಶಶಿಕಾಂತ್, ಉಪಾಧ್ಯಕ್ಷರಾದ ಗಿರೀಶ್ ದಟ್ಟಗಳ್ಳಿ,ವಿಜಯ ಮಂಜುನಾಥ್,ಲಕ್ಷ್ಮಿ, ಕಾರ್ಯದರ್ಶಿಗಳಾದ ನಾಗರಾಜ್,ಬಿ ಎಸ್ ಚೇತನ್,  ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸ್ಟಿಫನ್, ಸುಜಿತ್,ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಟ್, ಅಭಿಷೇಕ್ ಗೌಡ,ಸಂತೋಷ್, ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಚಪ್ಪಾಜಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭಶ್ರೀ, ರಮಾಬಾಯಿ, ಪೂಜಾ, ಎಸ್ತರ್,ಆಶ್ರಯ ಕೃಷ್ಣ,     ಪೈಲ್ವನ್ ರವಿ, ಆನಂದ್, ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: