ಮೈಸೂರು

ಮೈಸೂರಿನಲ್ಲಿ ಮೊದಲ ದಿನ 9.69ಕೋ.ರೂ.ಮದ್ಯ ಮಾರಾಟ : ನಿಯಮಗಳನ್ನು ಉಲ್ಲಂಘಿಸಿದ 2 ಬಾರ್ ಗೆ ದಂಡ

ಮೈಸೂರು,ಮೇ.6:- ಲಾಕ್ ಡೌನ್ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮೊದಲ ದಿನ ಮುಗಿಬಿದ್ದು ಮದ್ಯಪ್ರಿಯರು ಮದ್ಯ ಖರೀದಿಸಿದ್ದು ಮೊದಲ ದಿನ 9.69ಕೋ.ರೂ.ಮದ್ಯ ಮಾರಾಟವಾಗಿದೆ.

ಮೊದಲ ದಿನ 8,89,41,727ರೂ.ಮೌಲ್ಯದ 1,96,807 ಲೀಟರ್ ಮದ್ಯ, 80,42,177ರೂ.ಮೌಲ್ಯದ 39,594 ಲೀಟರ್ ಬಿಯರ್ ಮಾರಾಟವಾಗಿದೆ. ಮೈಸೂರು ನಗರ ಮತ್ತು ತಾಲೂಕಿನಲ್ಲಿ 4,91,01,547ರೂ.ಮೌಲ್ಯದ 90,361 ಲೀಟರ್ ಮದ್ಯ, 54,93,829ರೂ.ಮೌಲ್ಯದ 26,361ಲೀಟರ್ ಬಿಯರ್ ಮಾರಾಟವಾಗಿದೆ.

ನಂಜನಗೂಡು ತಾಲೂಕಿನಲ್ಲಿ  71,89,784 ರೂ. ಮೌಲ್ಯದ 18,570 ಲೀ. ಮದ್ಯ, 4,64,579 ರೂ. ಮೌಲ್ಯದ 2,300 ಬಿಯರ್ ಮಾರಾಟವಾಗಿದೆ.

ತಿ.ನರಸೀಪುರ ತಾಲೂಕಿನಲ್ಲಿ 76,29,491 ರೂ ಮೌಲ್ಯದ 18,566 ಲೀ.ಮದ್ಯ, 4,11,254 ರೂ.ಮೌಲ್ಯದ 1996ಲೀ ಬಿಯರ್ ಮಾರಾಟವಾಗಿದೆ.  ಹೆಚ್.ಡಿ.ಕೋಟೆ ತಾಲೂಕಿನಲ್ಲಿ 55,82,924ರೂ. ಮೌಲ್ಯದ 14857 ಲೀ.ಮದ್ಯ 2,12,969 ರೂ.ಮೌಲ್ಯದ 1040ಲೀ.ಬಿಯರ್ ಹುಣಸೂರು ತಾಲೂಕಿನಲ್ಲಿ 1,07,46,853ರೂ.ಮೌಲ್ಯದ 25,686ಲೀ.ಮದ್ಯ, 9,21,740 ರೂ.ಮೌಲ್ಯದ 4536ಲೀ.ಬಿಯರ್ ಕೆ.ಆರ್.ನಗರ ತಾಲೂಕಿನಲ್ಲಿ 21,17124 ರೂ.ಮೌಲ್ಯದ 12,198ಲೀಟರ್ ಮದ್ಯ 2,89,803 ರೂ.ಮೌಲ್ಯದ 1461ಲೀ.ಬಿಯರ್ ಮಾರಾಟವಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 65,74,000ರೂ.ಮೌಲ್ಯದ 16,566ಲೀ.ಮದ್ಯ, 2,48,000ರೂ.ಮೌಲ್ಯದ 1896 ಲೀ ಬಿಯರ್ ಮಾರಾಟವಾಗಿದೆ.

ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದ ನಗರದ ಎರಡು  ಬಾರ್ ಗಳಿಗೆ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ತಲಾ 500ರೂ.ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: