ಮೈಸೂರು

ನರಸಿಂಹ ಸ್ವಾಮಿ ಪ್ರಪಂಚವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವನ್ನು ಸಂಹರಿಸಿ ನಿರ್ಮೂಲನೆ ಮಾಡಲಿ : ಹೆಚ್.ಜಿ ಗಿರಿಧರ್ ಪ್ರಾರ್ಥನೆ

ಸರಳವಾಗಿ ನರಸಿಂಹ ಸ್ವಾಮಿ ಜಯಂತಿ ಆಚರಣೆ

ಮೈಸೂರು,ಮೇ.6:- ಡಾ.ರಾಜಕುಮಾರ್ ರಸ್ತೆಯಲ್ಲಿನ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನ ಕಲ್ಯಾಣಿ ಗಿರಿಯಲ್ಲಿಯಲ್ಲಿಂದು ನರಸಿಂಹ ಸ್ವಾಮಿ ಜಯಂತಿಯ ಪ್ರಯುಕ್ತ ನರಸಿಂಹ ಸ್ವಾಮಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ದೇವಸ್ಥಾನದ ಸಂಸ್ಥಾಪಕರು, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಜಿ ಗಿರಿಧರ್ ಮಾತನಾಡಿ  ವಿಷ್ಣು ಪರಮಾತ್ಮ ನರಸಿಂಹನ ಅವತಾರವೆತ್ತಿ, ತನ್ನ ಪ್ರಿಯ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಹಿರಣ್ಯಕಶಿಪು ಎಂಬ  ರಾಕ್ಷಸನನ್ನು ಸಂಹಾರಗೈದು ಶಿಷ್ಟ ರಕ್ಷಣೆ ಹಾಗೂ ದುಷ್ಟ ಸಂಹಾರಕ್ಕಾಗಿ ನರಸಿಂಹನ  ಅವತಾರವೆತ್ತಿ ಲೋಕ ಕಲ್ಯಾಣ ಉಂಟು ಮಾಡಿದ ಶುಭ ದಿನವನ್ನು ನರಸಿಂಹ ಜಯಂತಿಯಾಗಿ ಆಚರಿಸಲಾಗುತ್ತಿದೆ. ಆದರೆ ಈಗಿನ ಸನ್ನಿವೇಶದಲ್ಲಿ ಬಹುವಾಗಿ ಪ್ರಪಂಚವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವನ್ನು ಸಂಹರಿಸಿ ನಿರ್ಮೂಲನೆ ಮಾಡಲಿ ಎಂದು ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಬೇಕಾದ ಸಂದರ್ಭ ಬಂದೊದಗಿದೆ. ಹಾಗಾಗಿ ನಮ್ಮ ದೇವಸ್ಥಾನದಲ್ಲಿ ಸರಳವಾಗಿ ನರಸಿಂಹ ಜಯಂತಿಯನ್ನು ಆಚರಿಸುವ ಮೂಲಕ ಭಾರತ ಕೊರೋನಾ ಮುಕ್ತ ವಾಗಲಿ  ಎಂದು ನರಸಿಂಹ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಕೊರೋನ ಎಂಬ ದುಷ್ಟ ಶಕ್ತಿ ವಿಶ್ವದಾದ್ಯಂತ ಹೆಮ್ಮರವಾಗಿ ಬೆಳೆದಿದೆ. ಇಂದು ಮಾನವನ ಶಕ್ತಿ ಮೀರಿರುವಂತಹ ಕೊರೋನವನ್ನು ದೈವ ಶಕ್ತಿಯಿಂದಲೇ ಬಗ್ಗುಬಡಿಯಬೇಕು ಭಾರತ ವಿಶ್ವ ಗುರುವಾಗಲಿ ಎಂದರು.

ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಎಸ್ ಸಿ ಮೋರ್ಚಾ ಮಾಜಿ ಅಧ್ಯಕ್ಷರಾದ ನಾಗರಾಜ್ , ಮೈಸೂರು ನಗರ ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಕುಮಾರ್, ಕಾರ್ತಿಕ್ ನಾಯಕ್,ಯದು, ಚೇತನ್, ಮನೋಜ್ ಕುಮಾರ್ ಸಿಂಗ್,ಸವಿತ ಸಮಾಜದ ಬಾಲು, ರಾಘು  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: