ಪ್ರಮುಖ ಸುದ್ದಿಮನರಂಜನೆ

  ಮೆಟ್ಟಿಲಿನಿಂದ ಬಿದ್ದು ಗಾಯಗೊಂಡ ಸಿನಿಮಾಟೋಗ್ರಾಫರ್ ನದೀಮ್ ಖಾನ್ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ದೇಶ(ನವದೆಹಲಿ)ಮೇ.6:-   80 ಮತ್ತು 90 ರ ದಶಕಗಳಲ್ಲಿ ಬಾಲಿವುಡ್‌ನ ಪ್ರಸಿದ್ಧ ಛಾಯಾಗ್ರಾಹಕರಾಗಿದ್ದ, ಪ್ರಸಿದ್ಧ ಬರಹಗಾರ, ಕವಿ ಮತ್ತು ಗೀತರಚನೆಕಾರರಾಗಿದ್ದ  ರಾಹಿ ಮಾಸೂಮ್  ರಜಾ  ಅವರ ಪುತ್ರ ನದೀಮ್ ಖಾನ್ ಗಂಭೀರ ಸ್ಥಿತಿಯಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

69 ವರ್ಷದ ನದೀಮ್ ಖಾನ್ ಮೆಟ್ಟಿಲಿನಿಂದ ಬಿದ್ದ ಪರಿಣಾಮ ತಲೆ, ಎದೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಕಾರಣದಿಂದಾಗಿ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ನದೀಮ್ ಖಾನ್ ಕೂಡ ಖ್ಯಾತ ಛಾಯಾಗ್ರಾಹಕರಾಗಿದ್ದು, 40 ಕ್ಕೂ ಹೆಚ್ಚು ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.    ಇದರಲ್ಲಿ ಡಿಸ್ಕೋ ಡ್ಯಾನ್ಸರ್, ಕಿಂಗಲ್ ಅಂಕಲ್, ಇಲ್ಜಾಮ್, ಜುರ್ಮ್, ಆವಾರಗಿ, ಗುನಾಹ್, ಗ್ಯಾಂಗ್, ಖಳನಾಯಿಕಾ  ಮುಂತಾದ ಸೂಪರ್ ಹಿಟ್ ಚಿತ್ರಗಳು ಸೇರಿವೆ.

ಛಾಯಾಗ್ರಹಣದ ಜೊತೆ  ಜೊತೆಗೆ ‘ತಿರಚಿ ಟೋಪಿವಾಲೆ’ ಎಂಬ ಚಿತ್ರವನ್ನೂ ನಿರ್ದೇಶಿಸಿದರು. 1998 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಚಂಕಿ ಪಾಂಡೆ ಮತ್ತು ಮೋನಿಕಾ ಬೇಡಿ ಮುಖ್ಯ ಪಾತ್ರಗಳಲ್ಲಿದ್ದರು. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: