ಮೈಸೂರು

ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 250 ಮಂದಿಗೆ ದಿನಸಿ ಕಿಟ್ ವಿತರಣೆ

ಮೈಸೂರು,ಮೇ 6-ಆಲನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕ ಮಹಾದೇವ ತಮ್ಮ ವ್ಯಾಪ್ತಿಯಲ್ಲಿರುವ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್ ನಲ್ಲಿ ಸುಮಾರು 250 ಮಂದಿಗೆ ದಿನಸಿ ಕಿಟ್ ವಿತರಿಸಲಾಯಿತು. ಅಕ್ಕಿ 2ಕೆಜಿ, ರವೆ 1 ಕೆಜಿ, ಅರ್ಧ ಕೆಜಿ ನಾಲ್ಕು ತರಹದ ಕಾಳುಗಳು, ಅರ್ಧ ಲೀಟರ್ ಎಣ್ಣೆ, ಒಂದು ಕೆಜಿ ಈರುಳ್ಳಿ, ಆಲೂಗಡ್ಡೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದೊಡ್ಡಸ್ವಾಮಿ, ಮಹದೇವ, ರಾಜು, ಮೂರ್ತಿ, ಶಿವ ಮಾದೇವ್, ಮಹಾದೇವ್ (ಗಾಡಿ) ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: