ಮೈಸೂರು

ಚಿತ್ರಕಲೆ ಮನುಷ್ಯನ ಬದುಕಿನ ಸಂತಸಕ್ಕೆ ಕಾರಣವಾಗಬೇಕು : ಮಂಡ್ಯ ರಮೇಶ್

ರವಿವರ್ಮ ವಿದ್ಯಾಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೈಸೂರಿನ ಬಲ್ಲಾಳ್ ವೃತ್ತದಲ್ಲಿರುವ ಶ್ರೀ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಭಾನುವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ, ಚಿತ್ರ, ಶಿಲ್ಪ, ಪ್ರತಿಷ್ಠಾಪನಾ ಕಲಾಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಚಿತ್ರಕಲೆ ವ್ಯಾಪಾರ ಮಾತ್ರವಲ್ಲ. ಅದು ಮನುಷ್ಯನ ಬದುಕಿನ ಸಂತಸಕ್ಕೆ ಕಾರಣವಾಗಬೇಕು. ರಂಗಭೂಮಿಯಲ್ಲಿ ಚಿತ್ರಕಾರ ಇಲ್ಲದಿದ್ದರೆ ರಂಗಭೂಮಿ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ   ಕಲಾವಿದ ಸತೀಶ್ ಮುಳ್ಥಳ್ಳಿ , ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಹಾಗೂ ಚಿತ್ರಕಲಾ ಶಿಕ್ಷಕ ಕೆ.ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಪ್ರಭು ಹರಸೂರ್, ರಂಗಾಯಣದ ವಿಶ್ರಾಂತ ನಿರ್ದೇಶಕ ಎಚ್.ಜನಾರ್ದನ, ಪ್ರಾಚಾರ್ಯ ಶಿವಕುಮಾರ ಕೆಸರಮಡು, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶುಭಾಮಣಿ ಮತ್ತಿತರರು ಉಪಸ್ಥಿತರಿದ್ದರು.

ಅನೇಕ ವರ್ಣರಂಜಿ ಚಿತ್ರಗಳು, ಪ್ರಕೃತಿ ಕುರಿತ ನೆಲ-ಜಲ ಸಂರಕ್ಷಣೆಯ ಕುರಿತ ಚಿತ್ರಗಳು ಗಮನ ಸೆಳೆಯುತ್ತಿವೆ. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: