ಪ್ರಮುಖ ಸುದ್ದಿ

ಕೋವಿಡ್-19 ನೂತನ ಪ್ರಯೋಗಾಲಯ ಉದ್ಘಾಟಿಸಿದ ಸಚಿವ ಸುರೇಶ್ ಕುಮಾರ್

ರಾಜ್ಯ(ಚಾಮರಾಜನಗರ)ಮೇ.6:-  ಕೋವಿಡ್-19 ನೂತನ ಪ್ರಯೋಗಾಲಯವನ್ನು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಉದ್ಘಾಟಿಸಿದರು.

ಅವರು ಇಂದು ನಗರದ ವೈದ್ಯಕೀಯ ಕಾಲೇಜಿನಲ್ಲಿರುವ 1.70 ಕೋಟಿ ರೂ.ವೆಚ್ದದ ಅತ್ಯಾಧುನಿಕವಾದ ಕೋವಿಡ್-19 ನೂತನ ಪ್ರಯೋಗಾಲಯವನ್ನು  ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತ್ಯುತ್ತಮವಾದ ಪ್ರಯೋಗಾಲಯವಾಗಿದ್ದು ಇನ್ನು ಮುಂದೆ ಕೋವಿಡ್-19 ಪರೀಕ್ಷೆಗೆಂದು‌ ಮೈಸೂರಿಗೆ ಹೋಗಬೇಕಾಗಿತ್ತು.  ಈಗ ಈಗ ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊರೋನಗೆ ಸಂಬಂಧಪಟ್ಟ ಗಂಟಲು ದ್ರವ ರಕ್ತಪರೀಕ್ಷೆ ಹಾಗೂ ಇನ್ನಿತರ ವೈದ್ಯಕೀಯ ಪರೀಕ್ಷೆ ಗಳನ್ನು ನಡೆಸಬಹುದಾಗಿರುತ್ತದೆ.

ಸದರಿ ಪ್ರಯೋಗಾಲಯವನ್ನು 1.79 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: