ಮೈಸೂರು

ಮೊದಲ ಗಂಡನ ನೆನಪಿನಿಂದ ಹೊರಬರಲಾಗದೆ ವಿವಾಹಿತ ಮಹಿಳೆ ನೇಣಿಗೆ ಶರಣು

ಮೈಸೂರು,ಮೇ.6:- ಎರಡನೇ ವಿವಾಹವಾದ  ಮಹಿಳೆಯೋರ್ವರು ವಿವಾಹವಾಗಿ ಐದು ತಿಂಗಳಲ್ಲೇ ನೇಣಿಗೆ ಶರಣಾದ ಘಟನೆ ಉದಯಗಿರಿಯ ಗೌಸಿಯಾನಗರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಹೀನಾ ಕೌಸರ್(27) ಎಂದು ಹೇಳಲಾಗಿದ್ದು, ಈಕೆ ಮೂರು ಮಕ್ಕಳ ತಾಯಿಯಾಗಿದ್ದಳು. ಕೆಲ ತಿಂಗಳುಗಳ ಹಿಂದೆ ಹೀನಾ ಕೌಸರ್ ಮತ್ತೊಂದು ಮದುವೆ ಆಗಿದ್ದರು. ಆದರೆ ಮೊದಲ ಗಂಡನ ನೆನಪಿನಿಂದ ಹೊರಬರಲಾರದೆ ಕೊರಗುತ್ತಿದ್ದರು ಎನ್ನಲಾಗಿದೆ.  ಅದೇ ವೇದನೆಯಲ್ಲಿ ಹೀನಾ ಕೌಸರ್  ನೇಣಿಗೆ ಶರಣಾದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: