ಮೈಸೂರು

ಇಂದೂ ಕೂಡ ಮುಂದುವರಿದ ಶಾಸಕ ತನ್ವೀರ್ ಸೇಠ್ ಅವರ ಸೇವೆ : ಕಾರ್ಯಕರ್ತರ ಮೂಲಕ ಆಹಾರ ಧಾನ್ಯ ವಿತರಣೆ

ಮೈಸೂರು,ಮೇ.6:- ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಮೈಸೂರಿನಲ್ಲಿ ನಾನಾ ಸಂಘ ಸಂಸ್ಥೆಗಳು , ಜನ ನಾಯಕರು ನೆರವಿಗೆ ಧಾವಿಸಿ ಟೊಂಕ ಕಟ್ಟಿ ನಿಂತಿದ್ದಾರೆ.

ಕೋವಿಡ್19- ಟಾಸ್ಕ್ ಫೋರ್ಸ್ ಗಳನ್ನು  ಸ್ಥಾಪಿಸಿ ನಾನಾ ಕಡೆ ಅಗತ್ಯವಿರುವವರಿಗೆ  ಆಹಾರ , ಮತ್ತು ದವಸ ಧಾನ್ಯ, ಔಷಧ, ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನೀಡುತ್ತ ಬಂದಿದ್ದಾರೆ. ಈ  ರೀತಿ ಉದಾತ್ತ  ಸೇವೆಯು ಮೈಸೂರಿನ ಎನ್ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ನೇತೃತ್ವದಲ್ಲಿಯೂ ನಿರಂತರವಾಗಿ  ಸದ್ದಿಲ್ಲದೆ ನಡೆಯುತ್ತಿದೆ. ಇಂದೂ ಕೂಡ ತನ್ವೀರ್ ಸೇಠ್  ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ಸೇರಿ ಬಡವರಿಗೆ, ಕ್ಷೇತ್ರದ ಜನತೆಗೆ ಆಹಾರ ಧಾನ್ಯಗಳನ್ನು ವಿತರಿಸಿದರು.

ನವೆಂಬರ್ 17, 2019 ರಲ್ಲಿ ಭಾನುವಾರ ರಾತ್ರಿ ಮೈಸೂರಿನ ಬನ್ನಿ ಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ತನ್ವೀರ್​ ಸೇಠ್​ ಕುತ್ತಿಗೆ ಭಾಗಕ್ಕೆ ಯುವಕನೊಬ್ಬ ಕತ್ತಿಯಿಂದ ಹಲ್ಲೆ ನಡೆಸಿದ್ದ, ತೀವ್ರವಾಗಿ ಗಾಯಗೊಂಡ ತನ್ವೀರ್ ಸೇಠ್​ ಅವರನ್ನು ತಕ್ಷಣವೇ   ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿ ಸರ್ಜರಿ ನಡೆಸಲಾಗಿತ್ತು.

ಈ ಘಟನೆಯಿಂದ ತನ್ವೀರ್ ಸೇಠ್ ಕುಟುಂಬದವರಿಗೂ , ಅವರ ಅಭಿಮಾನಿಗಳಿಗೂ ಶಾಕ್ ಆಗಿತ್ತು, ಈ ಘಟನೆಯಿಂದ ತನ್ವೀರ್ ಸೇಠ್ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.  ಸದಾ ಹಸನ್ಮುಖಿ  ಯಾದ ತನ್ವೀರ್ ಸೇಠ್ ಅವರು ಜಾತಿ ಭೇದ ಮರೆತು ಎಲ್ಲಾ ಧರ್ಮದವರ ಜೊತೆ ಅನ್ಯೋನ್ಯವಾಗಿದ್ದವರು.  ಇವತ್ತಿನ ದಿನದವರೆಗೂ ಅವರು ವಿಶ್ರಾಂತಿಯಲ್ಲಿದ್ದಾರೆ.  ಕೋವಿಡ್ – 19 ಲಾಕ್ ಡೌನ್ ಸಂದರ್ಭದಲ್ಲಿ ಅವರು ಕ್ಷೇತ್ರದ ಜನತೆಗಾಗಿ ಕಷ್ಟದಲ್ಲಿರುವವರಿಗೆ ಏನಾದರೂ ಸೇವೆ ಮಾಡಬೇಕೆಂದು ತಂಡಗಳನ್ನು ರಚಿಸುವಂತೆ ಸೂಚಿಸಿ ಯಾರಿಗೆ ಅವಶ್ಯಕತೆ ಇದೆ ಅಂತಹವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯವನ್ನು ನೆರವೇರಿಸುತ್ತಿದ್ದಾರೆ.

ತಮ್ಮ ಆರೋಗ್ಯದ ದೃಷ್ಟಿಯಿಂದ ವೈದ್ಯರ ಸಲಹೆಯಂತೆ  ವಿಶ್ರಾಂತಿ ಪಡೆಯುತ್ತಿರುವ ಅವರು ಅಲ್ಲಿಂದಲೆ ಸೇವೆಗಾಗಿ ಹಾತೊರೆಯುತ್ತಿದ್ದಾರೆ. ಕ್ಷೇತ್ರಕ್ಕೆ ಬರಲು ತುದಿಗಾಲಿನಲ್ಲಿ ನಿಂತಿರುವ ತನ್ವೀರ್ ಸೇಠ್ ಅವರು ತಮ್ಮ ಕಾರ್ಯಕರ್ತರಿಂದ ಕ್ಷೇತ್ರದ ಜನತೆಗೆ  ಆಹಾರ , ಆಹಾರ ಪದಾರ್ಥಗಳನ್ನು ಹಾಗೂ ಔಷಧಿಯನ್ನು ತಲುಪಿಸುತ್ತಿದ್ದಾರೆ‌ .  ಎಲ್ಲರಿಗೂ ತಲುಪುತ್ತದೆ ಅಲ್ಲಿಯ ತನಕ ತಾಳ್ಮೆಯಿಂದ ಸಹಕರಿಸ ಬೇಕೆಂದು ಜನತೆಗೆ ಮನವಿ ಕೂಡಾ ಮಾಡಿದ್ದಾರೆ.

ಶಾಸಕ ತನ್ವೀರ್ ಸೇಠ್  ಅವರ ಆಣತಿಯಂತೆ ಕೊರೋನಾ ಲಾಕ್ ಡೌನ್ ದಿನಗಳಲ್ಲಿ  ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಪ್ರೆಸಿಡೆಂಟ್ ಅಬ್ದುಲ್ ಖಾದರ್ ( ಶಾಹಿದ್ ) ಅವರು ಮತ್ತು ಕಾರ್ಯಕರ್ತರು ಜನರ ಸಂಕಷ್ಟಕ್ಕೆ, ನೆರವಿಗೆ ಧಾವಿಸಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಒಟ್ಟಾರೆ ಮೈಸೂರು ಇಂದು ಕೋವಿಡ್ -19  ಮಹಾಮಾರಿಯ ಕಪಿಮುಷ್ಟಿಯಿಂದ ಹತೋಟಿಗೆ ಬರುತ್ತಿದ್ದು ಜನರು ಮಾಮೂಲಿನಂತೆ ಆಗಲು ಜಾಸ್ತಿ ದಿನಗಳು ಬೇಕಾಗಿಲ್ಲ.

ಮೈಸೂರು ಕೊರೋನಾ ಮುಕ್ತವಾಗಲು ಶ್ರಮಿಸುತ್ತಿರುವ ಜನಪ್ರತಿನಿಧಿಗಳು, ವೈದ್ಯರುಗಳು, ಆರಕ್ಷಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಕರುಗಳ ಕಾರ್ಯ ಎಂದೆಂದೂ ಶ್ಲಾಘನೀಯವಾಗಿದೆ. (ಕೆ.ಎಸ್,ಎಸ್.ಎಚ್)

 

 

 

 

 

 

 

 

Leave a Reply

comments

Related Articles

error: