ಮೈಸೂರು

ಶ್ರಮವಹಿಸಿ ಓದಿದರೆ ಯಶಸ್ಸು ನಿಶ್ಚಿತ : ಪ್ರೊ.ಆರ್.ರಾಜಣ್ಣ

ಮೈಸೂರು ವಿಶ್ವ ವಿದ್ಯಾನಿಲಯ ಸ್ಪರ್ಧಾ ಕೇಂದ್ರ. ನೇಗಿಲಯೋಗಿ  ವಿದ್ಯಾವರ್ಧಕ ಸ್ಪರ್ಧಾ ಕೇಂದ್ರದ ಸಂಯುಕ್ತಶ್ರಯದಲ್ಲಿ ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಜೂನಿಯರ್ ಬಿ.ಎ ಹಾಲ್‍ನಲ್ಲಿ  ಅಬಕಾರಿ ಉಪ ನಿರೀಕ್ಷಕ ಮತ್ತು ಅಬಕಾರಿ ರಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ  ಒಂದು ದಿನದ ಉಚಿತ  ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಾಗಾರವನ್ನು ಮೈಸೂರು ವಿಶ್ವ ವಿದ್ಯಾನಿಲಯ ಕುಲಸಚಿವ ಪ್ರೊ.ಆರ್ ರಾಜಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉತ್ತಮ ಮಾರ್ಗದರ್ಶನ ಪಡೆದು ನಿರಂತರವಾಗಿ ಶ್ರಮ ವಹಿಸಿ ಓದಿದರೆ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.

ಮೈಸೂರು ವಿಭಾಗದ ಅಬಕಾರಿ ಅಧೀಕ್ಷಕರು  ಡಾ. ಮಹಾದೇವಿಬಾಯಿ, ಎಕ್ಸೈಸ್ ಇನ್ಸೆಪೆಕ್ಟರ್ ಎಲ್.ಬಿ ವಿಕ್ರಂ,  ನೇಗಿಲಯೋಗಿ ಸಂಸ್ಥೆಯ ಅಧ್ಯಕ್ಷ  ಡಾ.ಕೆ.ಎಸ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.  (ಬಿ.ಎಂ-ಎಸ್.ಎಚ್)

Leave a Reply

comments

Related Articles

error: