ಮೈಸೂರು

ಎಸ್‍ಬಿಆರ್‍ಆರ್ ಮಹಾಜನ ಕಾಲೇಜಿನಲ್ಲಿ ಆನ್‍ಲೈನ್‍ನಲ್ಲಿ ತರಗತಿಗಳು ಯಶಸ್ವಿ : ಡಾ. ಎಸ್. ವೆಂಕಟರಾಮು

ಮೈಸೂರು, ಮೇ.7:-  ಕೋವಿಡ್-19 ಲಾಕ್‍ಡೌನ್ ಪರಿಣಾಮ ಮೈಸೂರು ನಗರವನ್ನು ಕೆಂಪು ವಲಯ (ರೆಡ್ ಜೋನ್) ಎಂದು ಗುರುತಿಸಲಾಗಿದ್ದು, ಕೋರೋನಾ ಸೊಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳನ್ನು ಕಲಿಕಾ ಕಾರ್ಯದಲ್ಲಿ ನಿರತರಾಗಿರುವಂತೆ ಮಾಡಲು ಹಾಗೂ 2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಪೂರಕವಾಗಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೈಸೂರಿನ ಪ್ರತಿಷ್ಠಿತ ಎಸ್‍ಬಿಆರ್‍ಆರ್ ಮಹಾಜನ ಕಾಲೇಜು ಹಾಗೂ ಮತ್ತು ಪೂಜಾಭಾಗವತ್ ಸ್ಮಾರಕ ಮಹಾಜನ ಸ್ನಾತಕೋತ್ತರ ಕೇಂದ್ರಗಳಲ್ಲಿ ಆನ್‍ಲೈನ್‍ನಲ್ಲಿ ತರಗತಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು ಈ ನಿಟ್ಟಿನಲ್ಲಿ ಪದವಿ ತರಗತಿಗಳ ಆನ್‍ಲೈನ್ ಕಲಿಕೆಯನ್ನು ಏಪ್ರಿಲ್ 25 ರಿಂದ ಹಾಗೂ ಸ್ನಾತಕೋತ್ತರ ವಿಭಾಗದ ಆನ್‍ಲೈನ್ ಕಲಿಕೆಯನ್ನು ಏಪ್ರಿಲ್ 12 ರಿಂದ ಪ್ರಾರಂಭವಾಗಿದ್ದು, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಂವಹನ ಕಾರ್ಯವು ಯಶಸ್ವಿಯಾಗಿ ಚಾಲ್ತಿಯಲ್ಲಿದೆ ಎಂದಿದ್ದಾರೆ.

ಕಾಲೇಜಿನ ಪ್ರಾಧ್ಯಾಪಕರುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆಗೆ ಅನುಕೂಲವಾಗುವಂತೆ ಮತ್ತು ಶಿಕ್ಷಣಕ್ಕೆ  ಸಂಬಂಧಿಸಿದ ಆನ್‍ಲೈನ್ ಕಲಿಕೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಕಾಲೇಜಿನ ಕಂಪ್ಯೂಟರ್ ನಿರ್ವಹಣಾ ವಿಭಾಗವು ಜೆಟ್‍ ಸಿ ಮತ್ತು ಮೈಕ್ರೋಸಾಫ್ಟ್ ಟೀಮ್ಸ್ ಅಪ್ಲಿಕೇಶನ್ ಸಾಫ್ಟವೇರ್‍ಗಳನ್ನು ಒದಗಿಸಿಕೊಟ್ಟಿದೆ. ಈ ಅಪ್ಲಿಕೇಶನ್‍ಗಳ ಮೂಲಕ ಆನ್‍ಲೈನ್‍ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಜೊತೆಯಲ್ಲಿ ವಿಡಿಯೋ ಕಾನ್‍ಫರೆನ್ಸ್, ಸಂವಾದ ಕಾರ್ಯಕ್ರಮಗಳು, ಪಠ್ಯಕ್ಕೆ ವಿಷಯಾನುಸಾರವಾಗಿ ಕೆಲವು ಗೋಷ್ಠಿಗಳನ್ನು ವೀಕ್ಷಿಸಲು ಯೂ ಟ್ಯೂಬ್ ಲಿಂಕ್‍ಗಳನ್ನು ಕಳುಹಿಸಲಾಗುತ್ತಿದ್ದು, ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆವೆಂದು ತಿಳಿಸಿದ್ದಾರೆ.

ಇದಲ್ಲದೆ, ಕಾಲೇಜಿನ ಮುಖ್ಯಸ್ಥರು ಸಹ ಶಿಕ್ಷಕರ ಪ್ರಗತಿ, ಕಾರ್ಯಸೂಚಿಯ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ಜೆಟ್‍ ಸಿ ಅಪ್ಲಿಕೇಶನ್ ಸಾಫ್ಟವೇರ್ ಮೂಲಕ ವಿಡಿಯೋ ಕಾನ್‍ಫರೆನ್ಸ್ ಹಮ್ಮಿಕೊಳ್ಳಲಾಗಿತ್ತು, ಎಲ್ಲಾ ವಿಭಾಗದ ವಿಷಯವಾರು ಮುಖ್ಯಸ್ಥರ ಜೊತೆಯಲ್ಲಿ ಸಂವಹನ ನಡೆಯಿತು.

ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗೆ ಅನುಕೂಲವಾಗುವಂತೆ ಕಾಲೇಜಿನ ಎಲ್ಲಾ ವಿಷಯಗಳ ವಿಭಾಗದವರು ವಿದ್ಯಾರ್ಥಿಗಳಿಗೆ ಸೂಕ್ತವಾಗಬಹುದಾದ, ಆರ್ಥೈಸುವ ನಿಟ್ಟಿನಲ್ಲಿ, ವಿಷಯಗಳನ್ನು ವಿವರಿಸುವ ಸರಳವಾದ ವಿಡಿಯೋ, ಆಡಿಯೋ ಮತ್ತು ಡಾಕ್ಯಮೆಂಟ್‍ಗಳನ್ನು ಕಳುಹಿಸಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು   ತಿಳಿಸಿರುತ್ತಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: