ಮೈಸೂರು

ಮೂರು ವರ್ಷ ಪೂರೈಸಿರುವ ಅಧಿಕಾರಿಗಳನ್ನು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ 3 ವರ್ಷ ಪೂರೈಸಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿಗೆ  ಬಿಜೆಪಿ ವಕ್ತಾರ  ಅಶ್ವತ್ ನಾರಾಯಣ್ ದೂರು ನೀಡಿದ್ದಾರೆ. ನಾಲ್ವರು ಅಧಿಕಾರಿಗಳ ಹೆಸರು ಉಲ್ಲೇಖಿಸಿ ದೂರನ್ನು ನೀಡಲಾಗಿದೆ. ದೂರಿನಲ್ಲಿ  ಉಪಚುನಾವಣೆಯಲ್ಲಿ  ಅವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆಹಾರ ಇಲಾಖೆ ಉಪನಿರ್ದೇಶಕ  ಕಾ.ರಾಮೇಶ್ವರಪ್ಪ, ಪ್ರಾಥಮಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸಪ್ಪ, ಎಇಇ ಶಿವಮಾದಯ್ಯ, ಇಓ ರೇವಣ್ಣ ಎಂಬ ಅಧಿಕಾರಿಗಳ  ವಿರುದ್ದ ದೂರು ನೀಡಲಾಗಿದೆ.
ಇವರೆಲ್ಲರು ರಾಜ್ಯದ ಸಚಿವರುಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಒಂದೆ ಸ್ಥಳದಲ್ಲಿ 3 ವರ್ಷ ಪೂರೈಸಿದ್ದರೂ ವರ್ಗಾವಣೆಯಾಗದೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಲಾಗಿದೆ. ಈ ಕೂಡಲೆ ಅಧಿಕಾರಗಳನ್ನು ವರ್ಗಾವಣೆ ಮಾಡಬೇಕು ಆಗ್ರಹಿಸಲಾಗಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: