ಪ್ರಮುಖ ಸುದ್ದಿ

ಎಸ್ ಪಿಬಿಯವರಿಗೆ ಲೀಗಲ್ ನೋಟೀಸ್ ನೀಡಿದ ಇಳಯರಾಜ

ಹೊಸದಿಲ್ಲಿ: ನಾನು ಸಂಗೀತ ಸಂಯೋಜನೆ ಮಾಡಿರುವ ಹಾಡುಗಳನ್ನು ಹಾಡಬಾರದು ಎಂದು ಮೇರು ಬಹುಭಾಷಾ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ  ಅವರು ಲೀಗಲ್‌ ನೋಟಿಸ್‌ ನೀಡಿದ್ದಾರೆ ಎನ್ನಲಾಗಿದೆ.

ನನ್ನ ಅನುಮತಿ ಇಲ್ಲದೆ ಹಾಡುಗಳನ್ನು ನೀವು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಬಾರದು ಎಂದು ನೋಟಿಸ್‌ನಲ್ಲಿ  ಎಚ್ಚರಿಸಿದ್ದಾರೆ.

ಚಿತ್ರರಂಗದಲ್ಲಿ 50 ವರ್ಷಗಳನ್ನು ಕಳೆದ ಸಂಭ್ರಮದಲ್ಲಿರುವ ಎಸ್‌ಪಿಬಿ ವಿದೇಶಗಳಲ್ಲಿ  ಎಸ್‌ಪಿಬಿ -50 ಎನ್ನುವ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.   ಅಲ್ಲಿನ ವೇದಿಕೆಗಳಲ್ಲಿ ಗಾಯಕಿ ಚಿತ್ರಾ , ಚರಣ್‌ ಅವರೊಂದಿಗೆ ಇಳೆಯರಾಜ ಧ್ವನಿ ಸಂಯೋಜಿಸಿದ ಅನೇಕ ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿದ್ದರು.

ಲೀಗಲ್‌ ನೋಟಿಸ್‌ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಎಸ್‌ಪಿಬಿ  ಇಳೆಯರಾಜ ಅವರಿಗೆ ನಾನು ಕಾನೂನಾತ್ಮಕವಾಗಿಯೇ ಉತ್ತರ ನೀಡುತ್ತೇನೆ ಎಂದಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: