ಮೈಸೂರು

ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ : ಬಿ.ಎಸ್.ಯಡಿಯೂರಪ್ಪ

ನಂಜನಗೂಡು ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.
ಅಧಿಕಾರಿಗಳು ಆಡಳಿತ ಪಕ್ಷದ ಜೊತೆ ಶಾಮೀಲಾಗಿದ್ದಾರೆಂದು ಹೇಳಿದ ಯಡಿಯೂರಪ್ಪ ಸರ್ಕಾರಿ ಅಧಿಕಾರಿಗಳು ದುರುಪಯೋಗದಲ್ಲಿ ಭಾಗಿಯಾಗುತ್ತಿದ್ದಾರೆಂದರು.
ಈ ಬಗ್ಗೆ ತಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು. ಪರಮೇಶ್ವರ್ ಚುನಾವಣೆ ನಂತರ 20ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂಬ ಕುರಿತಂತೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಈಗಾಗಲೇ ಮುಳುಗುತ್ತಿರುವ ಹಡಗಾಗಿದೆ. ಹಾಗಾಗಿ ಆ ಹಡಗಿಗೆ ಬಿಜೆಪಿಯಿಂದ ಯಾರೂ ಹೋಗಲ್ಲ ಎಂದು ಹೇಳಿದರು.
ನಂಜನಗೂಡು, ಗುಂಡ್ಲುಪೇಟೆ ಎರಡು ಕ್ಷೇತ್ರಗಳಲ್ಲಿ ಗೆಲುವು ಬಿಜೆಪಿಗೆ ನಿಶ್ಚಿತ ಎಂದು ಬಿಎಸ್‍ವೈ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಬಿಜೆಪಿಯ ಕೆಲವು ಮುಖಂಡರು ಯಡಿಯೂರಪ್ಪನವರ ಜೊತೆಗಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: