ಮೈಸೂರು

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಬರ್ಬರ ಕೊಲೆ

ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನನ್ನು ಯಾರೋ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದಾರೆ.

ಕೊಲೆಯಾದಾತನನ್ನು ರಾಘವೇಂದ್ರ ನಗರದ ನಿವಾಸಿ  ಪೇಂಟರ್ ವೃತ್ತಿ ಮಾಡಿಕೊಂಡಿದ್ದ ಸುರೇಶ್(30) ಎಂದು ಗುರುತಿಸಲಾಗಿದೆ. ಈತ ಕಳೆದ ರಾತ್ರಿ 10ಗಂಟೆಯ ಸುಮಾರಿಗೆ ಮೆಡಿಕಲ್ ಶಾಪ್ ಗೆ ಮಾತ್ರೆ ತರಲೆಂದು ಬಂದಿದ್ದು, ರಾತ್ರಿ 12ಗಂಟೆ ಆದರೂ ಮನೆಗೆ ವಾಪಸ್ ಆಗಿರಲಿಲ್ಲ. ಗಾಬರಿಯಾದ ಮನೆಯವರು ಆತನನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಎಲ್ಲಿಯೂ ಕಾಣಿಸುವುದಿಲ್ಲ. ಲೀಡ್ಸ್ ಜ್ಯೋತಿ ಪಬ್ಲಿಕ್ ಶಾಲೆಯ ಬಳಿ ನಾಯಿಗಳ ಚೀರಾಟ ಕೇಳಿ ಬರುತ್ತದೆ ಎಂದು ತೆರಳಿ ವೀಕ್ಷಿಸಲಾಗಿ ಸುರೇಶ್ ಹೆಣವಾಗಿ ಬಿದ್ದಿದ್ದ.  ಈ ಕುರಿತು ಉದಯಗಿರಿಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಕತ್ತಿಗೆ ಗಾಜಿನ ತುಂಡಿನಿಂದ ಬಲವಾಗಿ ಹಲ್ಲೆ ಮಾಡಲಾಗಿತ್ತು. ಕೊಲೆಗೆ ಕಾರಣ ತಿಳಿದುಬಂದಿಲ್ಲ.

ಉದಯಗಿರಿ ಠಾಣೆಯ ಎಸಿಪಿ ರಾಜಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: