
ಮೈಸೂರು
ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಮನೆಗೆಲಸದ ಮಹಿಳೆಯರು, ಕೂಲಿಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಪ್ರಕಾಶ್
ಮೈಸೂರು,ಮೇ.8:- ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಲಾಗಿದ್ದು, ಲಾಕ್ ಡೌನ್ ನಿಂದ ಮನೆ ಕೆಲಸ ನಿರ್ವಹಿಸಿ ಬದುಕು ಸಾಗಿಸುವ ಶ್ರಮಿಕ ಮಹಿಳೆಯರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಇಂದು ದಿನಸಿ ಕಿಟ್ ಗಳನ್ನು ಐಟಿಡಿಪಿ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಪ್ರಕಾಶ್ ವಿತರಿಸಿದರು.
ಅವರ ಜೊತೆಯಲ್ಲಿ ಅವರ ಧರ್ಮಪತ್ನಿ, ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷರಾದ ಕೆ. ಎಸ್. ಶಿವರಾಮು. ಕೆ ಪಿ ಸಿ ಸಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಹರೀಶ್ ಯುವ ಮುಂಖಡರಾದ ಮಹೇಶ್ ಗೌಡ, ಲೋಕೇಶ್ ಕುಮಾರ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)