ಲೈಫ್ & ಸ್ಟೈಲ್

ಉಪ್ಪು ರುಚಿಗಷ್ಟೇ ಅಲ್ಲ ಸ್ನಾನದ ನೀರಿಗೆ ಬೆರೆಸಿದಾಗಲೂ ಇದೆ ಮಹತ್ವ!

ಉಪ್ಪನ್ನು ಕೇವಲ ಆಹಾರ ಪದಾರ್ಥಗಳ ಜೊತೆ ಮಾತ್ರ ರುಚಿಗಾಗಿ ಬಳಸಲಾಗುತ್ತದೆ ಎಂದು ತಿಳಿದುಕೊಂಡಿದ್ದೇವೆ. ಆದರೆ ಅದನ್ನು ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗಲಿವೆ.

ಮೊಣಕಾಲು ನೋವು ಶಮನ : ಉಪ್ಪನ್ನು ಬೆರೆಸಿದ ನೀರಿನಿಂದ ಸ್ನಾನ ಮಾಡಿದರೆ ಮೊಣಕಾಲಿನಲ್ಲಿರುವ ಎಲುಬುಗಳ ನೋವು ನಿವಾರಣೆಯಾಗಲಿದೆ. ಇದರಿಂದ ಸಂಧಿನೋವುಗಳು ಶಮನಗೊಳ್ಳಲಿವೆ.

ಮಸಲ್ಸ್ ನೋವು : ಉಪ್ಪನ್ನು ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಮಸಲ್ಸ್ ಗಳಿಗೆ ರಿಲ್ಯಾಕ್ಸ್ ದೊರಕಲಿದೆ. ಮಸಲ್ಸ್ ನೋವಿನಿಂದ ಮುಕ್ತಿ ದೊರಕಲಿದೆ.

ಒತ್ತಡ : ಉಪ್ಪು ಮಿಶ್ರಿತ ನೀರಿನ್ನು ಸ್ನಾನ ಮಾಡುವುದರಿಂದ ರಕ್ತಸಂಚಾರ ಸರಾಗವಾಗಿ ನಡೆಯಲಿದೆ. ಮಿದುಳು ರಿಲ್ಯಾಕ್ಸ್ ಆಗಿ ಒತ್ತಡವನ್ನು ನಿವಾರಿಸಲಿದೆ.

ಇನ್ ಫೆಕ್ಷನ್ : ಉಪ್ಪು ಮಿಶ್ರಿತ ನೀರಿನಲ್ಲಿ ಮ್ಯಾಗ್ನಿಶಿಯಂ, ಕ್ಯಾಲ್ಶಿಯಂ, ಸೋಡಿಯಂ ಹಾಗೂ ಮಿನರಲ್ಸ್ ಗಳಿದ್ದು, ತ್ವಚೆ ಒಳಗೆ ಸಾಗಿ ತ್ವಚೆಯನ್ನು ಸ್ವಚ್ಛಗೊಳಿಸಲಿದೆ. ಇದರಿಂದ ತ್ವಚೆಯ ಇನ್ ಫೆಕ್ಷನ್ ನಿಂದ ಮುಕ್ತಿ ಪಡೆಯಬಹುದು.

ಕಾಂತಿಯುಕ್ತ ತ್ವಚೆ : ಉಪ್ಪು ನೀರು ತ್ವಚೆಯ ಡೆಡ್ ಸೆಲ್ಸ್ ಗಳನ್ನು ತೊಲಗಿಸಲು ಸಹಾಯಕವಾಗಿದೆ. ಪ್ರತಿದಿನ ಉಪ್ಪು ಮಿಶ್ರಿತ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯು ಮೃದು ಮತ್ತು ಕಾಂತಿಯುಕ್ತವಾಗಿರಲಿದೆ.

ನಿದ್ರೆ : ಉಪ್ಪು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದರಿಂದ ದಣಿವು ಮತ್ತು ಒತ್ತಡ ದೂರವಾಗಲಿದೆ. ಇದರಿಂದ ಮಿದುಳು ಶಾಂತಗೊಂಡು ರಾತ್ರಿಯಲ್ಲಿ ಒಳ್ಳೆಯ ನಿದ್ರೆ ಬರಲಿದೆ.

ತಲೆಹೊಟ್ಟು : ಇದರಲ್ಲಿರುವ ಕೆಲವು ಅಂಶಗಳು ಫಂಗಲ್ ಇನ್ ಪೆಕ್ಷನ್ ನ್ನು ತಡೆಯಲಿದೆ. ಇದರಲ್ಲಿ ಪ್ರತಿದಿನ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಆರೋಗ್ಯಯುತ ಕೇಶ : ಉಪ್ಪುನೀರಿನಲ್ಲಿ ಸ್ನಾನ ಮಾಡುವುದರಿಂದ ರಕ್ತಸಂಚಾರ ಸುಗಮವಾಗುವುದಲ್ಲದೇ ಕೂದಲಿನಲ್ಲಿರುವ ಬ್ಯಾಕ್ಟಿರಿಯಾಗಳು ನಶಿಸುತ್ತವೆ. ಇದರಿಂದ ಕೂದಲು ಆರೋಗ್ಯಯುತವಾಗಿರುವುದಲ್ಲದೇ, ಕಾಂತಿಯುಕ್ತವಾಗಿರಲಿದೆ.

ಎಸಿಡಿಟಿ : ಉಪ್ಪುನೀರಿನಲ್ಲಿ ಅಡಕವಾಗಿರುವ ಅಂಶಗಳು ಶರೀರದಲ್ಲಿನ ಎಣ್ಣೆಯ ಅಂಶವನ್ನು ನಿಯಂತ್ರಣದಲ್ಲಿರಿಸಲಿದೆ. ಇದರಿಂದ ಎಸಿಡಿಟಿಯ ಸಮಸ್ಯೆ ದೂರವಾಗಲಿದೆ.

ಕೇವಲ ಉಪ್ಪು ಸೇವಿಸುವುದಕ್ಕೆ ಮಾತ್ರವಲ್ಲದೇ ಸ್ನಾನದ ನೀರಿಗೂ ಒಂದು ಚಮಚ ಸೇರಿಸಿ ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದು.   (ಎಸ್.ಎಚ್)

Leave a Reply

comments

Related Articles

error: