ಮೈಸೂರು

ಆಹಾರ ಧಾನ್ಯಗಳುಳ್ಳ ಆಹಾರ ಕಿಟ್ ವಿತರಿಸಿದ ರಾಜ್ ಪೂತ್ ಕ್ಷತ್ರಿಯ ಸಮಾಜ್

ಮೈಸೂರು,ಮೇ.10:-  ಗಾಯತ್ರಿಪುರಂನ ನಿವೃತ್ತ ಸೈನಿಕರ ಕಾಲೋನಿಯ ಶ್ರೀ ಮಹಾರಾಣಾ ಪ್ರತಾಪ್ ಸಿಂಹಜೀ, ರಾಜ್ ಪೂತ್ ಕ್ಷತ್ರಿಯ ಸಮಾಜ್ ವತಿಯಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಮತ್ತು ಸಮಾಜದ ಬಂಧುಗಳಿಗೆ ಆಹಾರ ಧಾನ್ಯಗಳುಳ್ಳ ಆಹಾರ ಕಿಟ್ ನ್ನು  ಇಂದು ವಿತರಿಸಲಾಯಿತು.

ಅಲ್ಲದೇ, ಶ್ರೀ ಮಹಾರಾಣಾ ಪ್ರತಾಪ್ ಸಿಂಹಜೀ ಅವರ 480 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಅಧ್ಯಕ್ಷರಾದ ಸತ್ಯನಾರಾಯಣ ಸಿಂಗ್, ಕಾರ್ಯದರ್ಶಿ ಮಂಜುನಾಥ್ ಸಿಂಗ್, ಸಂಘಟನಾ ಕಾರ್ಯದರ್ಶಿ ಗಿರಿಧರ್ ಸಿಂಗ್, ಉಪಾಧ್ಯಕ್ಷರಾದ ಅನಿತ ಸಿಂಗ್,ನಿರ್ದೇಶಕರುಗಳಾದ ದೇವುಕುಮಾರ್ ಸಿಂಗ್, ಜೈ ಸಿಂಗ್, ಮೋಹನ್ ಸಿಂಗ್, ಯಶವಂತ್ ಸಿಂಗ್,ಮುರುಳಿಧರ್ ಸಿಂಗ್,ಪೃಥ್ವಿಸಿಂಗ್,ಬವರ್ ಸಿಂಗ್ ಮತ್ತು ಮನೋಹರಸಿಂಗ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: