ಮೈಸೂರು

ರಸ್ತೆ ಬದಿ ಮಹಿಳಾ ವ್ಯಾಪಾರಿಗಳಿಗೆ ಕೊಡೆ ಕೊಟ್ಟು ಬಿಸಿಲು ಮರೆಸಿದ ಬಿ.ವೈ ವಿಜಯೇಂದ್ರ ಅಭಿಮಾನಿಗಳು

ಮೈಸೂರು,ಮೇ.11:- ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ರಸ್ತೆ ಬದಿ  ಮಹಿಳಾ ವ್ಯಾಪಾರ ಮಾಡುವ ತಾಯಂದಿರಿಗೆ   ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ  ಹಾಗೂ ಸಿಎಂ ಪುತ್ರರಾದ ಬಿವೈ ವಿಜಯೇಂದ್ರ ಯಡಿಯೂರಪ್ಪ  ಬಳಗದ ವತಿಯಿಂದ ಕೊಡೆ ನೀಡುವ ಮೂಲಕ ವಿನೂತನವಾಗಿ ವಿಶ್ವ ತಾಯಂದಿರ  ದಿನಾಚರಣೆ ಆಚರಿಸಲಾಯಿತು.

ಮೈಮುಲ್ ನಿರ್ದೇಶಕರಾದ ಎಸ್ ಸಿ ಅಶೋಕ್ ಅವರ ನೇತೃತ್ವದಲ್ಲಿ ಮೈಸೂರಿನ ನಂಜಿಮಳಿಗೆಯಲ್ಲಿರುವ  ರಸ್ತೆ ಬದಿ ಮಹಿಳಾ ವ್ಯಾಪಾರಿಗಳಿಗೆ ಕೊಡೆ ವಿತರಿಸಿದರು.

ನಂತರ ಮಾತನಾಡಿದ ಅವರು  ಬಿವೈ ವಿಜಯೇಂದ್ರ ಯಡಿಯೂರಪ್ಪ  ಬಳಗದ ವತಿಯಿಂದ ಅಮ್ಮಂದಿರ ದಿನಾಚರಣೆ ಅಂಗವಾಗಿ ಬೀದಿ ಬದಿ ವ್ಯಾಪಾರ ಮಾಡುವ ತಾಯಂದಿರಿಗೆ ಕೊಡೆ ವಿತರಿಸಿದ್ದೇವೆ ಸಮಾಜದಲ್ಲಿ ನಾವು ಎಷ್ಟೇ ಜವಾಬ್ದಾರಿಯುತ ಹುದ್ದೆ ನಿರ್ವಹಿಸಿದ್ದರೂ, ಕೀರ್ತಿ ಗಳಿಸಿದರೂ ಅದಕ್ಕೆ ಕಾರಣಕರ್ತರು ನಮ್ಮ ತಂದೆ ತಾಯಂದಿರು. ಪೋಷಕರು. ಸಮಾಜದಲ್ಲಿ ಇಂದಿನ ದಿನದಲ್ಲಿ ಪ್ರತಿಯೊಬ್ಬರು ಐಷಾರಾಮಿ ಜೀವನವನ್ನು ನಡೆಸುವ ಮುನ್ನ ಅಂಬೆಗಾಲಿಡುವ ದನ್ನು ಕಲಿಸುವ ಪೋಷಕರನ್ನು ಮರೆಯಬಾರದು ಎಂದರು .ಪೋಷಕರೇ ನಮ್ಮ ಪರಮಾತ್ಮರು. ಮಗುವಿಗೆ ಮೊದಲು ಹಸಿವನ್ನು ನಿಭಾಯಿಸಿ ಆಹಾರ ನೀಡಿದ್ದ  ತಂದೆ ತಾಯಂದಿರನ್ನು ನಾವು ಕಾಪಾಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುವುದು ಸರಿಯಲ್ಲ. ಇಂದಿನ  ದಿನಗಳಲ್ಲಿ ವೃದ್ಧಾಶ್ರಮಕ್ಕೆ ಸೇರಿಸುವ ಮಂದಿ ಹೆಚ್ಚಾಗಿದ್ದಾರೆ. ಆದರೆ ಅದಕ್ಕೆ ನಮ್ಮ ದೇಶದ ಸಂಸ್ಕೃತಿಯನ್ನು ಸಂಸ್ಕಾರವನ್ನು ಪಾಲಿಸದೆ ಇರುವುದೇ ಮುಖ್ಯ ಕಾರಣ ಎಂದರು.

ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಲ್ ಆರ್ ಮಹಾದೇವ ಸ್ವಾಮಿ ಮಾತನಾಡಿ ಲಾಕ್ ಡೌನ್ ಆರಂಭದಿಂದಲೂ ಬಡವರಿಗೆ, ಕೂಲಿಕಾರ್ಮಿಕರಿಗೆ ಊಟ,ಔಷಧಿ, ಆಹಾರ ಕಿಟ್ ವಿತರಿಸುತ್ತಾ ಬಂದಿದ್ದೇವೆ.ಈ ಬೀದಿ ಬದಿ ವ್ಯಾಪಾರಿ ತಾಯಂದಿರು ಜೀವನ ಸಾಗಿಸಲು ಬಿಸಿಲು ಮಳೆ ಎನ್ನದೇ ವ್ಯಾಪಾರ ಮಾಡುತ್ತಾರೆ.    ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಅವರಿಗೆ ಬಳಗದ ವತಿಯಿಂದ ಕೊಡೆ ವಿತರಿಸಿದ್ದೇವೆ. ತಾಯಂದಿರ ದಿನಾಚರಣೆ ಒಂದು ದಿನಕ್ಕೆ ಸೀಮಿತ ವಾದುದಲ್ಲ. ತಾಯಿ ಮಗುವಿಗೆ  ಜನ್ಮ ನೀಡಿದ್ದನ್ನು ಸಂಭ್ರಮಿಸುವ ದಿನ ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು. ಆದರೆ ಕೆಟ್ಟ ತಾಯಿಯಂತೂ ಇರುವುದಿಲ್ಲ. ತಂದೆ ತಾಯಿಯರನ್ನು ಕಡ್ಡಾಯವಾಗಿ ಮಕ್ಕಳು ಕೊನೆ ಕಾಲದವರೆಗೂ ನೋಡಿಕೊಳ್ಳಬೇಕು ಎನ್ನುವ  ಕಠಿಣ ಕಾನೂನನ್ನು ಸರ್ಕಾರ ಮುಂದಿನ ದಿನದಲ್ಲಿ ರೂಪಿಸಬೇಕಾಗಿದೆ ಎಂದರು.

ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮಿದೇವಿ ಮಾತನಾಡಿ  ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು. ಪ್ರಾಥಮಿಕ ಹಂತದಲ್ಲಿ ಉತ್ತಮ ಸಂಸ್ಕಾರ ನೀಡಬೇಕು. ಮಗುವಿನ ಉಜ್ವಲ ಭವಿಷ್ಯ ನಿರ್ಮಾಣ ಮಾಡುವಲ್ಲಿ ತಾಯಿ ನೀಡುವ ಸಂಸ್ಕಾರ ಮಹತ್ವದ್ದಾಗಿದೆ. ತಾಯಿಯ ಸ್ಥಾನವನ್ನು ಜಗತ್ತಿನ ಯಾವ ಸಂಪತ್ತೂ ತುಂಬಿಸಲಾಗದು. ತಾಯಿ ಎಂದರೆ ಮಾತೃ ಸ್ವರೂಪಿ. ಕ್ಷಮಯಾಧರಿತ್ರಿ ಎಂದರೂ ಕಣ್ಣಿಗೆ ಕಾಣುವ ದೇವರು ಅಂದ್ರೇ ಅದು ಅಮ್ಮ.ಅಮ್ಮಂದಿರ ದಿನದ ಪ್ರಯುಕ್ತ  ನಂಜಮಳಿಗೆಯಲ್ಲಿರುವ ಬೀದಿ ಬದಿ ಅಮ್ಮಂದಿರಿಗೆ ಕೊಡೆ ನೀಡಿದ್ದೇವೆ ಎಂದರಲ್ಲದೇ ಅಮ್ಮಂದಿರನ್ನು ಗೌರವಿಸಿ ಎಂದರು.

ಈ ಸಂದರ್ಭದಲ್ಲಿ ಶ್ಯಾಮಲ ಬೇಕರಿ ಮಾಲೀಕರಾದ ಆನಂದ್. ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ .ನಿಖಿಲ್  .ಜಸ್ವಂತ್. ಸತೀಶ್. ಅಶೋಕ್ .ವಕೀಲರಾದ ಪ್ರಸನ್ನ.ನ ಹರೀಶ್ .ಅರಸೀಕೆರೆ ಉಮೇಶ್ ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: