ಮೈಸೂರು

ಪ್ರಮಾಣ ಪತ್ರ ವಿತರಣೆ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮ : ಮಾ.22

ಜ್ಞಾನಜ್ಯೋತಿ ಸಂಸ್ಥೆಯು ಜೆಎಸ್ಎಸ್ ಆಸ್ಪತ್ರೆಯ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.22 ರಂದು  ಬೆಳಿಗ್ಗೆ 11.30 ಕ್ಕೆ ಜೆಎಸ್ಎಸ್ ಆಸ್ಪತ್ರೆಯ ಸಭಾಂಗಣದಲ್ಲಿ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಅರಿವು ಕಾರ್ಯಕ್ರಮ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿ ಹೇಮಾವತಿ ಎಂ.ಎಸ್ ಅವರು ತಿಳಿಸಿದರು.

ಸೋಮವಾರ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಬೆಟಸೂರ್ ಮಠ್, ಮೈಸೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಅಧಿಕಾರಿ ಸುರೇಶ್ ಬಾಬು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ‍್ಯಕ್ಷ ಕೆ.ದೀಪಕ್, ಅಖಿಲ ಭಾರತ ಮಹಿಳಾ ಸಂಘಟನೆಯ ಆಶಿತಾ ಉಪಸ್ಥಿತರಿರುತ್ತಾರೆ. ಅಲ್ಲದೇ ಇಂದಿರಮ್ಮ, ಶಮೀಮ್ ತಾಜ್, ಪವಿತ್ರ ಮತ್ತು ಶೋಭ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ‍್ಠಿಯಲ್ಲಿ ಸಂಸ‍್ಥೆಯ ಗೌರವಾಧ್ಯಕ್ಷೆ ಹೇಮಲತಾ, ನಿರ್ದೇಶಕಿಯರಾದ ಸೌಭಾಗ್ಯ, ಕಲ್ಪನಾ ಮತ್ತು ಸಲಾಮತ್ ಬಾನು ಹಾಜರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: