ಮೈಸೂರು

ಮಾ.25-28: ಗುಬ್ಬಿವೀರಣ್ಣ 125ನೇ ವರ್ಷಾಚರಣೆ, ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ನಾಟಕಗಳ ಪ್ರದರ್ಶನ, ಅಭಿನಂದನೆ, ಕೃತಿ ಲೋಕಾರ್ಪಣೆ

 ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಹಿರಿತೆರೆ ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ಮಂಡ್ಯರಮೇಶ್ ನೇತೃತ್ವದ ನಟನರಂಗ ಶಾಲೆಯಲ್ಲಿ ಮಾ.25ರಿಂದ 28ರವರೆಗೆ  ಗುಬ್ಬಿ ವೀರಣ್ಣ ಅವರ 125ನೇ ವರ್ಷಾಚರಣೆ ಮತ್ತು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಮೊದಲ ಬಾರಿಗೆ  ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ನಾಟಕ ಪ್ರದರ್ಶನಕ್ಕೆ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿದೆ.

ಮಾ.25ರಂದು  ಸಂಜೆ 6ಕ್ಕೆ ಬೆಂಗಳೂರಿನ ಸಮುದಾಯ ತಂಡವು ಅಭಿನಯಿಸುವ ಶಶಿಧರ ಭಾರೀಘಾಟ್ ನಿರ್ದೇಶನದ ಮಹಾತ್ಮಕಬೀರ ನಾಟಕದ ಪ್ರದರ್ಶನವಿದ್ದು, ನಾಲ್ಕು ದಿನದ ಈ ನಾಟಕೋತ್ಸವವನ್ನು ಹಿರಿಯರಂಗಚೇತನ ಮಾಸ್ಟರ್ ಹಿರಣ್ಣಯ್ಯ ಉದ್ಘಾಟಿಸಲಿದ್ದಾರೆ. ಈ ನಾಲ್ಕೂ ದಿನ ವೃತ್ತಿರಂಗ ದಿಗ್ಗಜರ ಭಾವಚಿತ್ರ ಪ್ರದರ್ಶನವನ್ನುಏರ್ಪಡಿಸಲಾಗಿದ್ದು, ಈ ಭಾವಚಿತ್ರ ಪ್ರದರ್ಶನವನ್ನು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಸರ್ವಮಂಗಳಾ ಶಂಕರ್‍ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ. ದ್ರುವಕುಮಾರ್ ಮತ್ತು ಹಿರಿಯರಂಗ ನಿರ್ದೇಶಕ ಶಶಿಧರ ಭಾರಿಘಾಟ್‍  ಭಾಗವಹಿಸಲಿದ್ದಾರೆ.

ಮಾ.26ರಂದು  ಸಂಜೆ 6ಕ್ಕೆ ಬೆಂಗಳೂರಿನ ಕಲಾ ಗಂಗೋತ್ರಿ ತಂಡ ಅಭಿನಯಿಸುವ ಬಿ.ವಿ.ರಾಜಾರಾಂ ನಿರ್ದೇಶನದ ಪ್ರಹ್ಲಾದ ವಿಜಯ  ನಾಟಕದ ಪ್ರದರ್ಶನವಿದ್ದು ಹಿರಿಯ ವೃತ್ತಿರಂಗ ಪೋಷಕ  ಎಚ್.ಎಸ್. ಗೋವಿಂದಗೌಡ, ಮೈಸೂರು ನಗರಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಕೆ.ಶಂಕರ್‍  ಮತ್ತು  ಹಿರಿಯರಂಗ ನಿರ್ದೇಶಕರಾದ  ಬಿ.ವಿ.ರಾಜಾರಾಂ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮಾ.27 ರಂದು ಸಂಜೆ 06ಕ್ಕೆ ಬೆಂಗಳೂರು ಎನ್.ಎಸ್.ಡಿ ಅಭಿನಯಿಸುವ  ಸಿ.ಬಸವಲಿಂಗಯ್ಯ ನಿರ್ದೇಶನದ ಅಕ್ಕಮಹಾದೇವಿ ನಾಟಕ ಪ್ರದರ್ಶನವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಚೆನ್ನಪ್ಪ,  ಹಿರಿಯರಂಗಕರ್ಮಿ ಶ್ರೀಕಂಠ ಗುಂಡಪ್ಪ ಮತ್ತು ಬೆಂಗಳೂರು ಎನ್.ಎಸ್.ಡಿಯ ನಿರ್ದೇಶಕ  ಸಿ.ಬಸವಲಿಂಗಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಾ.28 ರಂದು ಸಂಜೆ 6ಕ್ಕೆ ನಟನರಂಗಶಾಲೆಯ ಬಹು ನಿರೀಕ್ಷಿತ ನಾಟಕ ಮಂಡ್ಯರಮೇಶ್ ನಿರ್ದೇಶನದ ಸುಭದ್ರಾಕಲ್ಯಾಣ ನಾಟಕದ ಪ್ರದರ್ಶನವಿದ್ದು, ಇದಕ್ಕೂ ಮೊದಲು ಮಹತ್ವದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವಿದೆ.

ಹಿರಿಯ ರಂಗಕರ್ಮಿ ಡಾ.ಬಿ.ಜಯಶ್ರೀ ಅವರಆತ್ಮಕಥೆ ಕಣ್ಣಾ ಮುಚ್ಚೇ ಕಾಡೇಗೂಡೇ ಪುಸ್ತಕವನ್ನುಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆಯ ಸಚಿವೆ ಉಮಾಶ್ರೀ ಲೋಕಾರ್ಪಣೆ ಮಾಡಲಿದ್ದಾರೆ. ನಾಟಕರತ್ನ ಡಾ.ಗುಬ್ಬಿ ವೀರಣ್ಣ ಅವರ ಆತ್ಮಕಥೆ ಕಲೆಯಕಾಯಕದ ಆಂಗ್ಲ ಅವತರಣಿಕೆ  ಆರ್ಟ್‍ಈಸ್ ಲೈಫ್  ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

ಡಾ.ಗುಬ್ಬಿ ವೀರಣ್ಣ ಅವರ ಬದುಕಿನ ಭಾವಚಿತ್ರಗಳ ಸಂಗ್ರಹ  ಕಾಫಿಟೇಬಲ್ ಬುಕ್  ಕೃತಿಯನ್ನು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಆಡಳಿತಾಧಿಕಾರಿ ಡಾ.ನಿರಂಜನ ವಾನಳ್ಳಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯರಂಗ ಸಂಗೀತಗಾರ ವೈ.ಎಂ.ಪುಟ್ಟಣ್ಣಯ್ಯ, ಹಿರಿಯ ವೃತ್ತಿರಂಗಕರ್ಮಿ ಮತ್ತು ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್, ವೃತ್ತಿರಂಗಕಲಾವಿದರಾದ  ಜಿ.ವಿ.ಕೃಷ್ಣ, ರಾಧಾ-ರುಕ್ಮಿಣಿ, ಡಾ.ಗುಬ್ಬಿ ವೀರಣ್ಣಟ್ರಸ್ಟ್‍ನ ಅಧ್ಯಕ್ಷೆ ಡಾ. ಬಿ. ಜಯಶ್ರೀ ಹಾಗೂ ಮನೋಹರ ಗ್ರಂಥಮಾಲೆಯ ಮುಖ್ಯಸ್ಥ ಸಮೀರ ಜೋಷಿ ಪಾಲ್ಗೊಳ್ಳಲಿದ್ದಾರೆ.

ನಾಲ್ಕು ದಿನದ ಈ ನಾಟಕೋತ್ಸವದಲ್ಲಿ ಹಿರಿಯರಂಗ ಚೇತನಗಳಿಗೆ ಅಭಿನಂದನೆ, ರಂಗಗೀತೆಗಳು, ಶುದ್ಧ ಕಂಪನಿ ನಾಟಕಗಳ ಪ್ರದರ್ಶನ, ಅಪರೂಪದ  ಕೃತಿಗಳ  ಲೋಕಾರ್ಪಣೆ  ಮತ್ತು  ವೃತ್ತಿರಂಗ  ದಿಗ್ಗಜರ  ಭಾವಚಿತ್ರ ಪ್ರದರ್ಶನವಿದೆ.  (ಎಸ್.ಎಚ್)

 

Leave a Reply

comments

Related Articles

error: