ಕರ್ನಾಟಕಪ್ರಮುಖ ಸುದ್ದಿ

ಇಂದು ವಿಶ್ವ ಶುಶ್ರೂಷಕರ ದಿನ: ಶುಭಕೋರಿ ಟ್ವೀಟ್ ಮಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಮೇ 12-ಇಂದು ವಿಶ್ವ ಶುಶ್ರೂಷಕರ ದಿನ. ವೈದ್ಯರಿಗಿಂತ ಹೆಚ್ಚಾಗಿ ಶುಶ್ರೂಷಕರು ರೋಗಿಗಳ ಆರೈಕೆ ಮಾಡುತ್ತಾರೆ. ವೈದ್ಯರ ಸಲಹೆ ಸೂಚನೆಗೆ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಶುಶ್ರೂಷಕರ ಪಾತ್ರ ಅನನ್ಯವಾದುದು. ಇಂದು ಅವರಿಗೆ ಕೃತಜ್ಞತೆ ಸಲ್ಲಿಸುವ ಸಮಯ.

ಪ್ರಸ್ತುತ ಕೊರೊನಾ ವೈರಸ್‌ ಉಲ್ಬಣಗೊಂಡಿರುವ ಈ ಸಂದರ್ಭದಲ್ಲಿ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ವಿಶ್ವದ ಎಲ್ಲ ಶುಶ್ರೂಷಕರಿಗೂ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸೋಣ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ .ಕುಮಾರಸ್ವಾಮಿ ಅವರು ವಿಶ್ವದ ಎಲ್ಲ ಶುಶ್ರೂಷಕರಿಗೆ ಶುಭಾಶಯ ಕೋರಿದ್ದಾರೆ. ಕೊರೊನಾ ವೈರಸ್ ಎಂಬ ಮಾರಕ ಕಾಯಿಲೆ ಒಡ್ಡಿರುವ ಸವಾಲಿಗೆ, ತ್ಯಾಗಗಳ‌ ಮೂಲಕ‌ ಪ್ರತಿ ಸವಾಲು ಹಾಕಿರುವ ವಿಶ್ವದ ಶುಶ್ರೂಷಕರು ಮನುಕುಲದ ಆರೈಕೆಯಲ್ಲಿ ತೊಡಗಿದ್ದಾರೆ. ಅವರ ಈ ಕಾರ್ಯ ಯಾವ ಬಲಿದಾನಕ್ಕೂ ಕಡಿಮೆಯಾದದ್ದಲ್ಲ. ಈ ಹೊತ್ತಿನಲ್ಲಿ ಅವರನ್ನು ಹೃದಯಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: