ದೇಶಪ್ರಮುಖ ಸುದ್ದಿ

40 ಕೋಟಿ ಗ್ರಾಹಕರ ವೊಡಾಫೋನ್‌–ಐಡಿಯಾ ವಿಲೀನ

ನವದೆಹಲಿ : ವೊಡಾಫೋನ್‌ ಜೊತೆಗಿನ ವಿಲೀನ ಪ್ರಕ್ರಿಯೆಗೆ ಐಡಿಯಾ ಸೆಲುಲಾರ್ ಸಮ್ಮತಿಸಿದೆ. ಬ್ರಿಟನ್‌ ಮೂಲದ ವೊಡಾಫೋನ್‌ ಇಂಡಿಯಾ ಲಿಮಿಟೆಡ್‌ ಜತೆಗಿನ ಸಂಯೋಜನೆ ಒಪ್ಪಂದಕ್ಕೆ ಐಡಿಯಾ ಸೆಲುಲಾರ್‌ ನಿರ್ದೇಶಕರ ಮಂಡಳಿ ಸೋಮವಾರ ಒಪ್ಪಿಗೆ ನೀಡಿದೆ.

ಸಂಯೋಜನೆಗೊಂಡ ಸಂಸ್ಥೆಯಲ್ಲಿ ವೊಡಾಫೋನ್‌ ಶೇ.45.1 ಪಾಲು ಹೊಂದಿರಲಿದ್ದು, ವಿಲೀನ ಪೂರ್ಣಗೊಂಡ ಬಳಿಕ ರೂ.38,740 ಮೌಲ್ಯದ ಶೇ.4.9 ರಷ್ಟು ಐಡಿಯಾ ಪ್ರವರ್ತಕರಿಗೆ ವರ್ಗಾವಣೆಯಾಗಲಿದೆ. ಕುಮಾರ್‌ ಮಂಗಳಂ ಬಿರ್ಲಾ ಹಾಗೂ ಐಡಿಯಾ ಸಮೂಹದ ಇತರರು ಶೇ.26 ಪಾಲು ಹೊಂದಲಿದ್ದಾರೆ. ಇನ್ನುಳಿದ ಭಾಗ ಸಾರ್ವಜನಿಕರಲ್ಲಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

26.58 ಕೋಟಿ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಏರ್‌ಟೆಲ್‌, ಪ್ರಸ್ತುತ ದೇಶದ ಅತಿ ದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆಯಾಗಿದೆ. ಶೇ.23.58 ಮಾರುಕಟ್ಟೆ ಪಾಲುದಾರಿಗೆ ಹೊಂದಿದೆ. ವೊಡಾಫೋನ್‌ ಇಂಡಿಯಾ ರೂ.82,800 ಕೋಟಿ ಹಾಗೂ ಐಡಿಯಾ ರೂ.72,200 ಕೋಟಿ ಮೌಲ್ಯ ಹೊಂದಿವೆ. ವಿಲೀನ ಪ್ರಕ್ರಿಯೆಯನ್ನು ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಸಮೂಹ ಜತೆಯಾಗಿ ನಿಯಂತ್ರಿಸಲಾಗುತ್ತದೆ.

ವೊಡಾಫೋನ್‌–ಐಡಿಯಾ ವಿಲೀನದ ಮೂಲಕ 40 ಕೋಟಿ ಗ್ರಾಹಕರನ್ನು ಹೊಂದಿರುವ ಬೃಹತ್‌ ದೂರಸಂಪರ್ಕ ಸಂಸ್ಥೆಯಾಗಲಿದೆ.

(ಎನ್‍.ಬಿ.ಎನ್‍)

Leave a Reply

comments

Related Articles

error: