ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಇಂದು 42 ಮಂದಿಯಲ್ಲಿ ಕೊರೊನಾ ದೃಢ: ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆ

ಬೆಂಗಳೂರು,ಮೇ 12-ರಾಜ್ಯದಲ್ಲಿ ಇಂದು ಮತ್ತೆ 42 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆಯಲ್ಲಿ 15, ಧಾರವಾಡದಲ್ಲಿ 9, ಹಾಸನದಲ್ಲಿ 5, ಬೆಂಗಳೂರಿನಲ್ಲಿ 3, ದಕ್ಷಿಣ ಕನ್ನಡ, ಬೀದರ್, ಯಾದಗಿರಿಯಲ್ಲಿ ತಲಾ 2, ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ, ಮಂಡ್ಯ ತಲಾ 1 ಪ್ರಕರಣ ವರದಿಯಾಗಿದೆ.

ಬಾಗಲಕೋಟೆಯಲ್ಲಿ ಪಿ-865, 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರಿಗೆ ಇನ್ಫ್ಲುಯೆನ್ಸ (ಐಎಲ್ಐ) ಲಕ್ಷಣವಿದೆ. ಪಿ-870, 16 ವರ್ಷ, ಪಿ-871, 14 ವರ್ಷದ ಬಾಲಕರು, ಪಿ-872, 33 ವರ್ಷದ ವ್ಯಕ್ತಿ, ಪಿ-873, 21 ವರ್ಷ, ಪಿ-874, 19 ವರ್ಷ, ಪಿ-875, 19 ವರ್ಷದ ಯುವಕರು, ಪಿ-876, 34 ವರ್ಷದ ವ್ಯಕ್ತಿ, ಪಿ-893, 30 ವರ್ಷದ ವ್ಯಕ್ತಿ, ಪಿ-894, 17 ವರ್ಷದ ಯುವಕ, ಪಿ-895, 32 ವರ್ಷದ ವ್ಯಕ್ತಿ, ಪಿ-896, 20 ವರ್ಷ, ಪಿ-897, 18 ವರ್ಷ, ಪಿ-898, 29 ವರ್ಷದ ಯುವಕರು, ಪಿ-899, 80 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ. ಇವರೆಲ್ಲರೂ ಅಹಮದಾಬಾದ್ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ. ಇದರಿಂದ ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಬ್ಬರು ಮೃತಪಟ್ಟಿದ್ದು, 21 ಮಂದಿ ಗುಣಮುಖರಾಗಿದ್ದಾರೆ.

ಧಾರವಾಡದಲ್ಲಿ ಪಿ-879, 55 ವರ್ಷ, ಪಿ-880, 31 ವರ್ಷದ ಪುರುಷರು, ಪಿ-882, 70 ವರ್ಷದ ವೃದ್ಧ, ಪಿ-881, 25 ವರ್ಷ, ಪಿ-883, 26 ವರ್ಷ, ಪಿ-884, 18 ವರ್ಷ, ಪಿ-885, 19 ವರ್ಷ, ಪಿ-886, 20 ವರ್ಷ, ಪಿ-887, 27 ವರ್ಷದ ಯುವಕರಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ಅಹಮದಾಬಾದ್ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 7 ಮಂದಿ ಗುಣಮುಖರಾಗಿದ್ದಾರೆ.

ಬಳ್ಳಾರಿಯಲ್ಲಿ ಪಿ-863, 30 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. 11 ಮಂದಿ ಗುಣಮುಖರಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಪಿ-864, 46 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರು ರೋಗಿ 790ರ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದು, 16 ಮಂದಿ ಗುಣಮುಖರಾಗಿದ್ದಾರೆ.

ಕಲಬುರಗಿಯಲ್ಲಿ ಪಿ-866, 14 ವರ್ಷದ ಬಾಲಕನಿಗೆ ಸೋಂಕು ತಗುಲಿದ್ದು, ಈತ ರೋಗಿ 529ರ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಆರು ಮಂದಿ ಮೃತಪಟ್ಟಿದ್ದು, 44 ಮಂದಿ ಗುಣಮುಖರಾಗಿದ್ದಾರೆ.

ಯಾದಗಿರಿಯಲ್ಲಿ ಪಿ-867, 33 ವರ್ಷದ ಮಹಿಳೆ, ಪಿ-868, 38 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರಿಬ್ಬರು ಅಹಮದಾಬಾದ್ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ.

ಮಂಡ್ಯದಲ್ಲಿ ಪಿ-869, 28 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಈತ ಮುಂಬೈ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. 14 ಮಂದಿ ಗುಣಮುಖರಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಪಿ-877, 26 ವರ್ಷ ಯುವಕ, ಪಿ-878, 50 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರಿಬ್ಬರು ರೋಗಿ 507ರ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದು, 7 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಪಿ-888, 33 ವರ್ಷ, ಪಿ-889, 38 ವರ್ಷ, ಪಿ-890, 38 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ರೋಗಿ 454ರ ಸಂಪರ್ಕದಲ್ಲಿದ್ದರು. ಇದರಿಂದ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ. 7 ಮಂದಿ ಮೃತಪಟ್ಟಿದ್ದು, 91 ಮಂದಿ ಗುಣಮುಖರಾಗಿದ್ದಾರೆ.

ಬೀದರ್ ನಲ್ಲಿ ಪಿ-891, 23 ವರ್ಷದ ಯುವಕ, ಪಿ-892, 30 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರಿಬ್ಬರು ಬೀದರ್ ನ ಕಂಟೈನ್ಮೆಂಟ್ ಜೋನ್ ನ ಸಂಪರ್ಕ ಹೊಂದಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಒಬ್ಬರು ಮೃತಪಟ್ಟಿದ್ದು, 13 ಮಂದಿ ಗುಣಮುಖರಾಗಿದ್ದಾರೆ.

ಹಾಸನದಲ್ಲಿ ಪಿ-900, 36 ವರ್ಷದ ವ್ಯಕ್ತಿ, ಪಿ-901, 27 ವರ್ಷದ ಯುವತಿ, ಪಿ-902, 7 ವರ್ಷ ಬಾಲಕಿ, ಪಿ-903, 45 ವರ್ಷದ ವ್ಯಕ್ತಿ, ಪಿ-904, 4 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ಮುಂಬೈ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದಾರೆ.

ರಾಜ್ಯದಲ್ಲಿ ಈವರೆಗೆ 904 ಸೋಂಕಿತರ ಪೈಕಿ, 31 ಮಂದಿ ಮೃತಪಟ್ಟಿದ್ದು, 426 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. (ಎಂ.ಎನ್)

 

Leave a Reply

comments

Related Articles

error: