ಮೈಸೂರು

ಶಾಸಕ ರಾಮದಾಸ್ ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿಗೂ ಸಹಕಾರ ನೀಡಿಲ್ಲ : ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಆರೋಪ

ಮೈಸೂರು,ಮೇ.12:-  ಶಾಸಕ ರಾಮದಾಸ್ ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿಗೂ ಸಹಕಾರ ನೀಡಿಲ್ಲ ಎಂದು ಆರೋಪಿಸಿರುವ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ರಾಮದಾಸ್ ಅವರನ್ನು ಮುಕ್ತ ಚರ್ಚೆಗೆ  ಆಹ್ವಾನಿಸಿದರು.

ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರಿಗೆ ಒಂದೇ ಒಂದು ಪ್ರಾಜೆಕ್ಟ್ ತಂದಿಲ್ಲ. ಅವರ ಕೆಲಸದ ಬಗ್ಗೆ ಮುಕ್ತ ಚರ್ಚೆಗೆ ಬರಲಿ. ನಾನು ನನ್ನ‌ ಕೆಲಸ ಬಗ್ಗೆ ಮುಕ್ತ ಚರ್ಚೆಗೆ ಬರುತ್ತೇನೆ. ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿಗೂ ಸಹಕಾರ ನೀಡಿಲ್ಲ. ಯಾವುದನ್ನೂ ಗೊತ್ತಿಲ್ಲ ಅಂತಾರೆ. ಇವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಮೈಸೂರಿಗೆ ಯಾವುದೇ ಕೊಡುಗೆ ನೀಡಿಲ್ಲ. ಸಾರ್ವಜನಿಕ ಜೀವನದಲ್ಲಿ ಇದ್ದು ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಾಮದಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ರಾಮದಾಸ್ ವಿರುದ್ಧ  ವಾಗ್ದಾಳಿ ನಡೆಸಿದ ಅವರು ಕಳೆದ ನಾಲ್ಕು ದಿನಗಳಿಂದ ಮೈಸೂರು ನಗರದಲ್ಲಿ ದೊಡ್ಡ ನಾಟಕ ನಡೆಯುತ್ತಿದೆ. ರಾಮದಾಸ್ ಯಾವತ್ತೂ ಅಭಿವೃದ್ಧಿ ಕೆಲಸದ ಪರ ಇದ್ದವರಲ್ಲ. ಚುನಾವಣೆ ಸಂದರ್ಭದಲ್ಲಿ ಇವರು ಹಿಂದೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಸುಯೇಜ್ ಫಾರಂ ಮುಂದೆ ನಾಟಕ ಮಾಡಿದ್ರು. ಈಗ ಅವರು ಗೆದ್ದು ಎರಡು ವರ್ಷ ಆಗಿದೆ. ಅಷ್ಟು ದಿನಗಳಿಂದ ಏನ್ ಮಾಡ್ತಿದ್ರು. ಅವರು ಈಗ ಎಲ್ಲವನ್ನು ಮರೆತಿದ್ದಾರೆ. ಈ ಪ್ರತಾಪ್ ಸಿಂಹನಿಗೂ ಬುದ್ಧಿ ಇಲ್ಲ. ರಾಮದಾಸ್ ಮಲಗಿದ್ರು. ನಿದ್ರೆ ಕಣ್ಣಿನಲ್ಲಿ ಎದ್ದು ಸಭೆನಾ ಸಮಾರಂಭನಾ ಅಂತಿದ್ದಾರೆ. ಶಾಸಕನಾಗಲು ಇವರು ಅರ್ಹರಲ್ಲ ಇವರು  ನಾಲಾಯಕ್. ಇವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನನಗೆ ಯಾವುದೇ ಪತ್ರ ಬಂದಿಲ್ಲ ಅಂತಾರೆ. ಒಬ್ಬ ಶಾಸಕನಾಗಿ  ತಮ್ಮ ಕ್ಷೇತ್ರದ ಸಭೆಗೆ  ಪತ್ರ ಬಂದಿಲ್ಲ ಅಂತಾರೆ. ಇದು ನಂಬುವ ಮಾತಾ? ಇವರು ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: