ಮೈಸೂರು

ವಿದ್ಯಾಶ್ರಮ ಕಾಲೇಜ್ ನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ “ಟೆಂಪಲ್ ಆಫ್ ಲರ್ನಿಂಗ್” ಆರಂಭ

ಮೈಸೂರು, ಮೇ 12: – ಪ್ರಪಂಚದಾದ್ಯಂತ  ಹರಡಿರುವ ಕೊರೋನಾ ಮಹಾಮಾರಿಯ ಕಾರಣದಿಂದ  ದೇಶಾದ್ಯಂತ ಲಾಕ್‌ಡೌನ್  ಪರಿಸ್ಥಿತಿಯಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿ ತಮ್ಮ ಕಲಿಕೆಯನ್ನು ನಡೆಸಲು ಸಾಧ್ಯವಿಲ್ಲದ ಕಾರಣ ತಮ್ಮ ನಿಯಮಿತ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನ ಜಯಲಕ್ಷ್ಮಿಪುರಂನ ವಿದ್ಯಾಶ್ರಮ ಪಿಯು ಕಾಲೇಜು ಇಂದಿನಿಂದ “ವಿದ್ಯಾಶ್ರಮ್ ಎನಿಟೈಮ್ ಎನಿವೇರ್” ಎಂಬ ಹೊಸ ದೃಷ್ಟಿಕೋನದೊಂದಿಗೆ   ಆನ್‌ಲೈನ್ ನಲ್ಲಿ   “ಟೆಂಪಲ್ ಆಫ್ ಲರ್ನಿಂಗ್” ಆರಂಭಿಸಿದೆ.

ವಿದ್ಯಾಶ್ರಮ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಬೆಳಿಗ್ಗೆ 9 ಗಂಟೆಗೆ ಯೂಟ್ಯೂಬ್‌ ಮೂಲಕ ಪ್ರದರ್ಶಿಸಲಾಯಿತು.

ಕಾಲೇಜಿನ ಉಪನ್ಯಾಸಕರಾದ ಸುಬ್ರಮಣಿಯನ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ‘ಎಕನಾಮಿಕ್ಸ್ & ಮೈಕ್ರೋ ಎಕನಾಮಿಕ್ಸ್ ‘ ಕುರಿತು ಉಪನ್ಯಾಸ ನೀಡಿದರು.

ಕೋವಿಡ್ -19 ನ ಲಾಕ್ ಡೌನ್ ಸಂದರ್ಭದಲ್ಲಿ  ವಿಶ್ವದ ಲಕ್ಷಾಂತರ ವಿದ್ಯಾರ್ಥಿಗಳಿಗೆ   ಆನ್‌ಲೈನ್ ಶಿಕ್ಷಣ ಶೈಕ್ಷಣಿಕ ತರಗತಿಗಳಿಗೆ ದಾರಿ ಮಾಡಿಕೊಡುತ್ತಿದೆ.

Leave a Reply

comments

Related Articles

error: