ಕರ್ನಾಟಕಪ್ರಮುಖ ಸುದ್ದಿ

ಕೊರೊನಾದಿಂದ ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 176 ಮಂದಿ ಪ್ರಯಾಣಿಕರನ್ನು ಹೊತ್ತು ಮಂಗಳೂರಿಗೆ ಬಂದ ಮೊದಲ ವಿಮಾನ

ಮಂಗಳೂರು,ಮೇ 13-ಕೊರೊನಾದಿಂದಾಗಿ ದುಬೈನಲ್ಲಿ ಸಂಕಷ್ಟಕ್ಕೀಡಾಗಿದ್ದ ಭಾರತೀಯರನ್ನು ತವರಿಗೆ ಕರೆತರಲಾಯಿತು. ದುಬೈಯಿಂದ 176 ಮಂದಿ ಪ್ರಯಾಣಿಕರನ್ನು ಹೊತ್ತ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಮಂಗಳವಾರ ಸಂಜೆ 5.19ಕ್ಕೆ ದುಬೈಯಿಂದ ಹೊರಟ ಏರ್‌ಇಂಡಿಯಾ ವಿಮಾನ ರಾತ್ರಿ ಸುಮಾರು 10.10ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿತು.

ದುಬೈಯಿಂದ ಆಗಮಿಸಿದ ಒಟ್ಟು ಪ್ರಯಾಣಿಕರಲ್ಲಿ 95 ಪುರುಷರು ಹಾಗೂ 81 ಮಹಿಳೆಯರಿದ್ದರು. 38 ಮಂದಿ ಗರ್ಭಿಣಿಯರು ಸಹ ಇದ್ದರು. ಪ್ರಯಾಣಿಕರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸೇರಿದವರು ಗರಿಷ್ಠ ಪ್ರಮಾಣದಲ್ಲಿದ್ದರು. ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ 96 ಮಂದಿ, ಉಡುಪಿ ಜಿಲ್ಲೆಗೆ ಸೇರಿದ 49 ಮಂದಿ ಹಾಗೂ ಉಳಿದ 31 ಮಂದಿ ಬೆಂಗಳೂರು, ಉತ್ತರ ಕನ್ನಡ, ಕೊಡಗು ಮುಂತಾದ ಇತರ ಜಿಲ್ಲೆಗಳಿಗೆ ಸೇರಿದ ಪ್ರಯಾಣಿಕರಾಗಿದ್ದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇವರನ್ನು ಜಿಲ್ಲಾಡಳಿತ ನೇಮಿಸಿದ ಐವರು ಹಿರಿಯ ಅಧಿಕಾರಿಗಳು ಬರ ಮಾಡಿಕೊಂಡರು. ನಂತರ ಅವರಿಗೆಲ್ಲ ವಿಮಾನ ನಿಲ್ದಾಣದಲ್ಲೇ ಸ್ಕ್ರೀನಿಂಗ್‌ ವ್ಯವಸ್ಥೆ, ಟೆಂಪರೇಚರ್ ‌ಪರೀಕ್ಷೆ ನಡೆಸಲಾಯಿತು. ನಂತರ ಪ್ರತ್ಯೇಕ ಐವರು ಅಧಿಕಾರಿಗಳು 10 ಬಸ್‌ಗಳಲ್ಲಿ ಅವರನ್ನು ನಗರದ 17 ಹೋಟೆಲ್‌ ಹಾಗೂ 12 ಹಾಸ್ಟೆಲ್‌ ಗಳಿಗೆ ಕರೆ ತಂದು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಐಎಎಸ್‌ ಪ್ರೊಬೇಷನರಿ ಅಧಿಕಾರಿ ಹಾಗೂ ಉಸ್ತುವಾರಿ ರಾಹುಲ್‌ ಶಿಂಧೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: