ಮೈಸೂರು

ಸಾವಿರಾರು ಜನರಿಗೆ ವಂಚನೆ ಪ್ರಕರಣ : ಇನ್ನಿಬ್ಬರು ಆರೋಪಿಗಳ ಬಂಧನ

ಮೈಸೂರಿನಲ್ಲಿ ವ್ಯಕ್ತಿಯೋರ್ವರಿಂದ ರೈಲ್ವೆ ಇಲಾಖೆಯಲ್ಲಿ ನಿಮ್ಮ ಮಗನಿಗೆ ಕೆಲಸ ಕೊಡಿಸುವುದಾಗಿ 2.80ಲಕ್ಷ ರೂ. ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು  ಮಾ.10ರಂದು ಬಂಧಿಸಿದ್ದಾರೆ. ಬಂಧಿತನನ್ನು ಹಾಸನ ಮೂಲದ ಪ್ರೀತಂ  ಅಲಿಯಾಸ್ ಸಾಜಿದ್ ಖಾನ್ ಎಂದು ಹೇಳಲಾಗಿತ್ತು. ಇದೀಗ ನಕಲಿ ಗುರುತಿನ ಪತ್ರಗಳನ್ನು ಮಾಡಲು ಸಹಕರಿಸಿದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹಾಸನದ ವಿಜಯ್, ಸಕಲೇಶಪುರದ ಕೀರ್ತಿ ಎಂದು ಗುರುತಿಸಲಾಗಿದೆ. ವಿಜಯ್ ಬಿಬಿಎಂ ಮುಗಿಸಿ ಆಡಿಟರ್ ಹತ್ತಿರ ಕಾರ್ಯನಿರ್ವಹಿಸುತ್ತಿದ್ದ. ಕೀರ್ತಿ ಪದವಿ ಪೂರೈಸಿದ್ದ ಎನ್ನಲಾಗಿದೆ. ಪ್ರೀತಂ ಅಲಿಯಾಸ್ ಸಾಜಿದ್ ಖಾನ್ ಗೆ ಮೂರನೆ ವ್ಯಕ್ತಿಯಿಂದ ಇವರಿಬ್ಬರ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತ್ತು. 2014ರಲ್ಲಿ ಈತನಿಗೆ ಕೀರ್ತಿ ಗುರುತಿನ ಪತ್ರಗಳನ್ನು ತಾನೇ ಮಾಡಿಕೊಡುತ್ತಿದ್ದ. ಬೇರೆ ಯಾರದೋ ಕಾರ್ಡ್ ಗಳಲ್ಲಿರುವ ಆಲೋಗ್ರಾಂಗಳನ್ನು ತೆಗೆದು ಪ್ರೀತಂ ಅಲಿಯಾಸ್ ಸಾಜಿದ್ ಖಾನ್ ಗೆ ಬೇರೆ ಹೆಸರಿನಲ್ಲಿ ಗುರುತಿನ ಪತ್ರ ಮಾಡಿಕೊಡುತ್ತಿದ್ದ. ಆದರೆ ಆಲೋ ಗ್ರಾಂ ಪರೀಕ್ಷಿಸಿದಾಗ ಅದು ಬೇರೆಯವರದ್ದೇ ಆಗಿರುತ್ತಿತ್ತು.

ಈ ಕುರಿತಂತೆ ಬೆಂಗಳೂರಿನ ಹೆಬ್ಬುಗೋಡಿಯಲ್ಲೂ ದೂರು ದಾಖಲಾಗಿತ್ತು. ಪ್ರೀತಂ ಅಲಿಯಾಸ್ ಸಾಜಿದ್ ಖಾನ್ ನೀಡಿದ ಹೇಳಿಕೆಯಂತೆ  ಇದೀಗ ಕೆ.ಆರ್.ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪತ್ತೆ ಕಾರ್ಯ  ನಡೆದಿದ್ದು, ಲಕ್ಷ್ಮಿನಾರಾಯಣ, ಸಿದ್ದರಾಜು ಪಾಲ್ಗೊಂಡಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಕಂಪ್ಯೂಟರ್, ಲ್ಯಾಪ್ ಟಾಪ್, ಪ್ರಿಂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: