ಮೈಸೂರು

ಮೈಸೂರು ಜಿಲ್ಲೆಯಲ್ಲಿ ಯಾವುದೇ ಕೊರೋನಾ ವೈರಸ್ ಪ್ರಕರಣ ಇಲ್ಲ ; ಇವತ್ತು ಇರೋ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ; ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ

ಮೈಸೂರು,ಮೇ.15:- ಮೈಸೂರು ಜಿಲ್ಲೆ ಕೊರೋನಾ ವೈರಸ್ 90 ಇರೋದು 0ಕ್ಕೆ ಬಂದಿದೆ. ಇದು ಸಂಭ್ರಮ ಆಚರಿಸುವ ವಿಷಯವಾದರೂ ಜಾಸ್ತಿ ಎಚ್ಚರವಹಿಸಬೇಕಾದ ಸಮಯ. ಈ ಕ್ಷಣದಲ್ಲಿ ಹೇಳಬಹುದೇ ಹೊರತು ಮುಂದೆ ಏನು ಬರತ್ತೆ ಅದಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿದ್ದೇವೆ. ಜನರು ನೆಮ್ಮದಿಯಿಂದ ಇರಬಹುದು. ಅದೇ ಸಮಯದಲ್ಲಿ ಸಹಕಾರವನ್ನೂ ಕೋಡಬೇಕಾಗತ್ತೆ. ನಿಮ್ಮ ಒಳ್ಳೆಯದಕ್ಕಾಗಿಯೇ ಸರ್ಕಾರ ಆಡಳಿತದ ಮೂಲಕ ನಿಮ್ಮ ಮುಂದೆ ಕೋರಿಕೊಳ್ತಾ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅವರಿಂದು ವಾರ್ತಾ ಮತ್ತು ಸಂಪರ್ಕ ಇಲಾಖೆ ಫೇಸ್ ಬುಕ್ ಪೇಜ್ ನಲ್ಲಿ ನೇರ ಮಾಹಿತಿ ನೀಡಿದ ಅವರು ಮಾರ್ಚ್ 21ಕ್ಕೆ ಮೊದಲ ಪ್ರಕರಣ ಪತ್ತೆಯಾಗಿತ್ತು. ಅಲ್ಲಿಂದ ಮೇ.15ರವರೆಗೆ ಅಂದರೆ ಸುಮಾರು ಎರಡೂವರೆ ತಿಂಗಳು ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿದ್ದರು. ಇಂದು ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗುವ ಮೂಲಕ ಮೈಸೂರು 0ಕ್ಕೆ ಬಂದು ನಿಂತಿದೆ.   ಸದ್ಯಕ್ಕೆ ಯಾವುದೇ ಪಾಸಿಟಿವ್ ಪ್ರಕರಣ ಈ ಒಂದು ಹಂತಕ್ಕೆ ತಂದು 90ಪ್ರಕರಣಕ್ಕೆ ಮುಕ್ತಿ ನೀಡಿದ್ದಕ್ಕೆ ಹಲವರಿಗೆ ಧನ್ಯವಾದಗಳನ್ನು ಹೇಳಬೇಕು. ಪೊಲೀಸ್ ಇಲಾಖೆಯ ಎಸ್ಪಿ, ಸಿಟಿ ಪೊಲೀಸ್ ಕಮೀಷನರ್, ಪೊಲೀಸ್ ಸಿಬ್ಬಂದಿಗಳು, ನಗರಪಾಲಿಕೆ ಆಯುಕ್ತರು , ಅಧಿಕಾರಿಗಳು, ಮುಡಾ ಆಯುಕ್ತರು ಅಧಿಕಾರಿಗಳು, ಆರೋಗ್ಯ  ಇಲಾಖೆಯ ಅಧಿಕಾರಿಗಳು, ಫೀಲ್ಡ್ ವರ್ಕರ್, ಪ್ಯಾರಾ ಮೆಡಿಕಲ್, ಆಶಾ ಕಾರ್ಯಕರ್ತರು, ಜಿಲ್ಲಾ ಪಂಚಾಯತ್ ಪಿಡಿಒಗಳು, ಹಲವು ಇಲಾಖಾಧಿಕಾರಿಗಳು ಇವರೆಲ್ಲ ತಮ್ಮ ಮಾತೃ ಇಲಾಖೆಯನ್ನು ಮರೆತು ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಡಿಹೆಚ್ ಒ, ಅವರ ಮೂರು ಜನರ ತಂಡ, ಆ್ಯಂಬ್ಯುಲೆನ್ಸ್ ಡ್ರೈವರ್, ಪೌರಕಾರ್ಮಿಕರು, ಹೋಗಾರ್ಡ್  ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

ಚುನಾಯಿತ ಜನಪ್ರತಿನಿಧಿಗಳು ಕೂಡ ನಮಗೆ ಸಹಕಾರವನ್ನು ನೀಡಿದ್ದಾರೆ. ಸಾರ್ವಜನಿಕರು ಕೂಡ ಸರ್ಕಾರ ನೀಡಿದ ಗೈಡ್ ಲೈನ್ ನ್ನು ಅರ್ಥ ಮಾಡಿಕೊಂಡು ಸಹಕಾರವನ್ನು ನೀಡಿದ್ದಾರೆ. ಅದರಿಂದ ಹರಡುವಿಕೆಯನ್ನು ತಡೆಯಲು ಸಾಧ್ಯವಾಯಿತು. ಕೆಲವರು ಮಾತು ಕೇಳಿಲ್ಲ, ಅದನ್ನು ಒಪ್ಪಿಕೊಳ್ಳುತ್ತೇನೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಅಗತ್ಯ.  ಕೈಗಾರಿಕೆಗಳು ಆರಂಭವಾಗಿವೆ. ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜನರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಯಾವುದೇ ಪ್ರಕರಣಗಳಿಲ್ಲದ ಜಿಲ್ಲೆಗಳಲ್ಲಿ ಹೊರರಾಜ್ಯ, ಜಿಲ್ಲೆಗಳಿಂದ ಜನರು ಬಂದು ಆಗಿದ್ದಿದೆ.  ನಮ್ಮಲ್ಲಿ ಕೂಡ ಹೊರರಾಜ್ಯದಿಂದ ಬಂದವರಿದ್ದಾರೆ. ಅವರೆಲ್ಲ ಫೆಸಿಲೇಟೆಡ್ ಕ್ವಾರೆಂಟೈನ್ ನಲ್ಲಿದ್ದಾರೆ. ಫೆಸಿಲೇಟೆಡ್ ಕ್ವಾರೆಂಟೈನ್ ಕಡ್ಡಾಯ. ಸಾಮರ್ಥ್ಯ ಇರುವವರು ಹಣ ನೀಡಿ ಹೋಟೆಲ್ ಲಾಡ್ಜ್ ಗಳಲ್ಲಿ ಇರಬಹುದು. ಒಬ್ಬ ವ್ಯಕ್ತಿಗಿಂತ ಇಡೀ ಸಮಾಜ ಕಾಪಾಡುವ ಉದ್ದೇಶ. ಲಕ್ಷಾಂತರ ಜನರಿಗೆ ಹರಡದಂತೆ ನೋಡಿಕೊಳ್ಳಬೇಕು. ಯಾರಿಗೂ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ ಎಂದು ತಿಳಿಸಿದರು.

ನಂಜನಗೂಡಿನಲ್ಲಿ 11ಕಂಟೈನ್ ಮೆಂಟ್ ಜೋನ್ ಇದೆ. ಅವಿರುವ ಕಡೆ 200ಮೀಟರ್ ವ್ಯಾಪ್ತಿ ಹೊರತುಪಡಿಸಿ ಇತರ ಕಡೆ ಕೆಲಸಕ್ಕೆ ಹೋಗುವವರು ಹೋಗಬಹುದು. ಐಡಿ ಕಾರ್ಡ್ ಇಟ್ಟುಕೊಂಡು ಅಧಿಕಾರಿಗಳು ಕೇಳಿದಾಗ ತೋರಿಸಬೇಕು.  ಬಟ್ಟೆ, ಆಭರಣ, ಚಪ್ಪಲಿ ಅಂಗಡಿಗಳಿಗೆ ಅನುಮತಿ ನೀಡಿಲ್ಲ. ಇನ್ನೆರಡು ದಿನಗಳಲ್ಲಿ ನೀಡುತ್ತೇವೆ. ಹೆದ್ದಾರಿಯಲ್ಲಿ ರಿಸ್ಟ್ರಿಕ್ಷನ್ ಮುಂದುವರಿಯಲಿದೆ. ಇತರೇ ರಾಜ್ಯದ ಗಾಡಿಗಳಿಗೆ ವಹಿವಾಟಿಗೆ ಅವಕಾಶವಿಲ್ಲ. ಹೆದ್ದಾರಿಯಲ್ಲಿ ವಿಧಿಸಿದ ರಿಸ್ಟ್ರಿಕ್ಷನ್ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಆಹಾರ ಧಾನ್ಯ, ತರಕಾರಿ, ಹಾಲು  ಅವುಗಳ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದರು.

ಪಾಲಿಕೆಯ ಆಯುಕ್ತರಾದ ಗುರುದತ್ ಹೆಗಡೆ ಮಾತನಾಡಿ 91ರಸ್ತೆಗಳಲ್ಲಿಯೂ ವ್ಯಾಪಾರ ವಹಿವಾಟಿಗೆ ಅವಕಾಸ ಮಾಡಿಕೊಡಲಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲ್ಲ, ಮಾಸ್ಕ್ ಧರಿಸಲ್ಲ ಎಂಬ ದೂರುಗಳು ಬಂದಿವೆ. ಹಾಗೆ ಮಾಡಬೇಡಿ ಎಂದು ಹೇಳಿದರು. ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗ್ತಿದೆ. ಮಾಸ್ಕ್ ಗಳನ್ನು ಒಂದು ಕವರ್ ನಲ್ಲಿ ಕಟ್ಟಿ ಅದನ್ನು ಪ್ರತ್ಯೇಕವಾಗಿಯೇ ಕೊಡಿ ಎಂದು ತಿಳಿಸಿದರು.

ಮೇ.19ರಿಂದ ಪ್ರಾಪರ್ಟಿ ಟ್ಯಾಕ್ಸ್ ಗಳನ್ನು ವಲಯಕಛೇರಿಗಳಲ್ಲಿ ಕಟ್ಟಿಸಿಕೊಳ್ಳಲಾಗುವುದು ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: