ಕರ್ನಾಟಕಪ್ರಮುಖ ಸುದ್ದಿ

ನಿವೇಶನ ಖರೀದಿಯಲ್ಲಿ ಅಕ್ರಮ ಎಸಗಿಲ್ಲ : ಸ್ಪೀಕರ್ ಕೋಳಿವಾಡ ಸ್ಪಷ್ಟನೆ

ಸ್ಪೀಕರ್ ಕೆ.ಬಿ.ಕೋಳಿವಾಡ ಪ್ರಭಾವ ಬೀರಿ ತಮ್ಮ ಮಕ್ಕಳಿಗೆ ನಿವೇಶನ ಕೊಡಿಸಿದ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ  ತಾವು‌ ನಿವೇಶನ ಖರೀದಿಯಲ್ಲಿ ಅಕ್ರಮ ಎಸಗಿಲ್ಲ ಎಂದು ಸ್ಪೀಕರ್ ಕೋಳಿವಾಡ ಸ್ಪಷ್ಟಪಡಿಸಿದ್ದಾರೆ.
ನೌಕರರ ಗೃಹ ನಿರ್ಮಾಣದ ಸಹಕಾರ ಸಂಘದಲ್ಲಿ ಶಾಸಕರು ಸೈಟ್ ತೆಗದುಕೊಳ್ಳೋದಕ್ಕೆ ಬೈಲಾ ದಲ್ಲಿ ಅವಕಾಶವಿದೆ. ಕಾನೂನು ಪ್ರಕಾರ ಸೈಟ್ ಖರೀದಿಯಾಗಿದೆ. 2005 ರಲ್ಲೇ ದುಡ್ಡು ತೆಗದುಕೊಂಡಿದ್ದಾರೆ.
2016 ರಲ್ಲಿ ರಿಜಿಸ್ಟ್ರಾರ್ ಮಾಡಿಕೊಟ್ಟಿದ್ದಾರೆ.ಬೈಲಾದಲ್ಲಿ ಸೈಟ್ ತೆಗದುಕೊಳ್ಳೋದಕ್ಕೆ ಅವಕಾಶ ಇದೆ.
ಕಾನೂನುಬಾಹಿರವಾಗಿ ಸೈಟ್ ಪಡೆದುಕೊಂಡಿಲ್ಲ. ನನ್ನ ಮೇಲೆ ಆರೋಪ ಶುದ್ಧ ಸುಳ್ಳು ಇದೆ.
2004 ರಲ್ಲಿ ತಾವು,ಬಸವರಾಜ ಹೊರಟ್ಟಿ ಹಾಗೂ ಶಾಸಕ ಶಿವಳ್ಳಿಯವರು ವಿಧಾನಸಭೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕಾನೂನು ಬದ್ಧವಾಗೇ ನಿವೇಶನ ಖರೀದಿಸಿದ್ದೇವೆ.ತಮ್ಮ‌ಪುತ್ರಿಯರು ಸಹಕಾರ ಸಂಘದ ಸಹ ಸದಸ್ಯರು.ಸಹ ಸದಸ್ಯರಿಗೆ ನಿವೇಶನ ಕೊಡಲು ಕಾನೂನಿನಲ್ಲಿ ಅವಕಾಶವಿದೆ.ಅದರಂತೆ ಖರೀದಿಸಲಾಗಿದೆ.ನಿವೇಶನ ಸಿಗದ ಕೆಲವು ನೌಕರರು ತಮಗೆ ಕೆಟ್ಟ ಹೆಸರು ತರಲು ಈ ಆರೋಪ ಮಾಡಿದ್ದಾರೆ.ಇಂತಹಾ ಆರೋಪಗಳು ದಿನಾ ಬರುತ್ತಲೇ ಇರುತ್ತವೆ.ಅವಕ್ಕೆಉತ್ತರ ಕೊಡಲು,ಕೋರ್ಟಿಗೆ ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: