ದೇಶಮನರಂಜನೆ

ಬಾಲಿವುಡ್ ಕಿರುತೆರೆ ನಟ ಸಚಿನ್ ಕುಮಾರ್ ನಿಧನ

ಮುಂಬೈ,ಮೇ 16-ಬಾಲಿವುಡ್ ಕಿರುತೆರೆ ನಟ, `ಕಹಾನಿ ಘರ್ ಘರ್ ಕಿ’ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸಚಿನ್ ಕುಮಾರ್ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಬಿನೈಫರ್ ಕೋಹ್ಲಿ ನಿರ್ಮಾಣದ ಲಜ್ಜಾ ಎಂಬ ಶೋನಲ್ಲೂ ಸಚಿನ್ ಕುಮಾರ್ ಕಾಣಿಸಿಕೊಂಡಿದ್ದರು. ಶೊನಲ್ಲಿ ಅವರದು ನೆಗಟೀವ್ ಪಾತ್ರವಾಗಿತ್ತು. ಸುದೀರ್ಘ ಸಮಯದ ಹಿಂದೆಯೇ ಸಚಿನ್ ನಟನೆಗೆ ಗುಡ್ ಬೈ ಹೇಳಿ ಫೋಟೋಗ್ರಫಿಯಲ್ಲಿ ತೊಡಗಿಕೊಂಡಿದ್ದರು.

ಹಿಂದಿ ಕಿರುತೆರೆ ನಟರಾದ ರಾಕೇಶ್ ಪೌಲ್, ಚೇತನ್ ಹನ್ಸರಾಜ್, ವಿನೀತ್ ರೈನಾ, ಸುರಭಿ ತಿವಾರಿ ಮುಂತಾದವರು ಸಚಿನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಟ ರಾಕೇಶ್ ಪೌಲ್, ಸುದ್ದಿ ನಿಜಕ್ಕೂ ದುಃಖಕರ. ಕೊನೆಯದಾಗಿ ಅವರನ್ನು ನಾನು ನೋಡಲು ಆಗಲಿಲ್ಲ. ಅಷ್ಟೊತ್ತಿಗಾಗಲೇ ಅವರ ದೇಹವನ್ನು ಚಿತಾಗಾರಕ್ಕೆ ಸಾಗಿಸಲಾಗಿತ್ತು. ನಮ್ಮಿಬ್ಬರದ್ದೂ ಎರಡು ದಶಕಗಳ ಗೆಳೆತನ. ಒಂದೇ ಏರಿಯಾದಲ್ಲಿ ಸಹೋದರರಂತೆ ವಾಸವಾಗಿದ್ದೆವು. ಪ್ರತಿ ಸಲ ಫೋನ್ ಮಾಡಿದಾಗಲೂ ಮತ್ತೆ ಮತ್ತೆ ಸಿಗೋಣ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಅವರನ್ನು ಭೇಟಿಯಾದಾಗ ಪಕೋಡ ಮಾಡಿ ಸ್ವತಃ ತಿನ್ನಿಸಿದ್ದ. ಕಳೆದ ಬಾರಿಯ ಹುಟ್ಟುಹಬ್ಬಕ್ಕೆ ನಾನು ಗೈರುಹಾಜರಾಗಿದ್ದೆ. ಸಂದರ್ಭದಲ್ಲಿ ಅವರ ಪೋಸ್ಟ್ಗೆ ಕಾಮೆಂಟ್ ಮಾಡಿ, ನಿನ್ನ ಪಕೋಡಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದೆ. ಜೀವನ ಹೇಗೆ ಎಂದು ಹೇಳುವುದೇ ಕಷ್ಟ. ಅವರ ನಿಧನದಿಂದ ಮನಸ್ಸಿಗೆ ತೀವ್ರ ನೋವಾಗಿದೆ ಎಂದಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: