ಮೈಸೂರು

ಅತ್ತೆ ಕೊಲೆಗೈಯ್ಯಲು ಯತ್ನಿಸಿದ ಸೋದರಳಿಯನಿಗೆ 7ವರ್ಷ ಜೈಲು

ಸೋದರತ್ತೆಯ ಕೊಲೆಗೆ ಯತ್ನಿಸಿದ ಅಳಿಯನಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 7ವರ್ಷ ಕಾರಾಗೃಹವಾಸ ಹಾಗೂ 10ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.

ಶಿಕ್ಷೆಗೆ ಒಳಗಾದವನನ್ನು ಪಡುವಾರಹಳ್ಳಿ (ವಿನಾಯಕನಗರ) ಎರಡನೇ ಕ್ರಾಸ್ ನಿವಾಸಿ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಈತ ತನ್ನ ಸೋದರತ್ತೆ ನಾಗಮ್ಮ ಎಂಬವರ ಕೊಲೆಗೆ ಯತ್ನಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ಜಿ.ಎಂ ಪಾಟೀಲ ಈ ಆದೇಶ ನೀಡಿದ್ದಾರೆ. ನಾಗಮ್ಮ ಮತ್ತು ಶ್ರೀಕಾಂತ್ ತಂದೆ ಪುಟ್ಟರಾಜು ಅಕ್ಕ-ತಮ್ಮ ಎರಡೂ ಕುಟುಂಬಗಳ ನಡುವಿನ ಆಸ್ತಿಯ ವಿಚಾರವಾಗಿ ವೈಷಮ್ಯವಿತ್ತು ಎನ್ನಲಾಗಿದೆ. 2011ರ ಮೇ 3ರಂದು ನಾಗಮ್ಮ ಅವರ ಮನೆಗೆ ನುಗ್ಗಿದ ಶ್ರೀಕಾಂತ್ ಗಲಾಟೆ ಮಾಡಿದ್ದ. ಬೀರು ಬಾಟಲಿಯನ್ನು ಒಡೆದು ಹರಿತವಾದ ಆಯುಧವನ್ನಾಗಿ ಮಾಡಿಕೊಂಡು ನಾಗಮ್ಮ ಅವರನ್ನು ಇರಿದಿದ್ದ. ಗಲಾಟೆಯನ್ನು ಬಿಡಿಸಲು ಮುಂದಾದ ಲಿಂಗಯ್ಯ ಎಂಬವರಿಗೂ ಇರಿಯಲಾಗಿತ್ತು. ಈ ಸಂಬಂಧ ನಾಗಮ್ಮ ಪುತ್ರ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಇನ್ಸಪೆಕ್ಟರ್ ಕ್ಯಾತೇಗೌಡ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದಂಡದ ಮೊತ್ತದಲ್ಲಿ 8ಸಾವಿರ ರೂ.ನ್ನು ನಾಗಮ್ಮ  ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ಆರೋಪಿಗೆ 7ವರ್ಷಗಳ ಜೈಲುವಾಸ ಶಿಕ್ಷೆ ವಿಧಿಸಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: