ಮೈಸೂರು

ಎರಡನೇ ದಿನವೂ  ಗೋರಖ್‌ಪುರಕ್ಕೆ 1391 ವಲಸೆ ಕಾರ್ಮಿಕರ ಪ್ರಯಾಣ

ಮೈಸೂರು,ಮೇ.18:- ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಎರಡನೇ ದಿನವೂ  ಅಶೋಕಪುರಂ ರೈಲ್ವೆ ನಿಲ್ದಾಣದಿಂದ ನಿನ್ನೆ ವಲಸೆ ಕಾರ್ಮಿಕರನ್ನು ಹೊತ್ತ ಶ್ರಮಿಕ್ ರೈಲು ಮಧ್ಯಾಹ್ನ2.20ಕ್ಕೆ   ಹೊರಟಿತು.

18 ಜಿಎಸ್‌ಸಿಎನ್ ಸ್ಲೀಪರ್ ಬೋಗಿಗಳು, 4 ಜಿಎಸ್ ಜನರಲ್ ಮತ್ತು 2 ಎಸ್‌ಎಲ್‌ಆರ್ ಸೇರಿದಂತೆ 24 ಬೋಗಿಗಳನ್ನು ಹೊಂದಿದ್ದ ರೈಲು ಒಟ್ಟು 1391 ಪ್ರಯಾಣಿಕರನ್ನು ಹೊತ್ತು ಸಾಗಿತು.

ಜಿಲ್ಲಾಡಳಿತವು ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿತ್ತು. ಸ್ಥಳೀಯ ರೋಟರಿ ಹೆರಿಟೇಜ್ ಕ್ಲಬ್ ಉಪಹಾರ ವ್ಯವಸ್ಥೆಯನ್ನು ನಿರ್ವಹಿಸಿತ್ತು. ನಿನ್ನೆ ಹೊರಟ ರೈಲು ಮಂಗಳವಾರ ಬೆಳಿಗ್ಗೆ 6ಗಂಟೆಗೆ ಗೋರಖ್ ಪುರ ತಲುಪಲಿದೆ.

ನೆರೆಯ ಜಿಲ್ಲೆಗಳಾದ ಕೊಡಗು, ಹಾಸನ ಮತ್ತು ಚಾಮರಾಜನಗರದಿಂದ ಬಂದ ವಲಸೆ ಕಾರ್ಮಿಕರು  ರೈಲು ಹತ್ತುವ ಮೊದಲು ಜಿಲ್ಲಾಡಳಿತ ಆಯೋಜಿಸಿದ್ದ ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಗಾದರು. ಪ್ರೋಟೋಕಾಲ್ ಪ್ರಕಾರ, ರೈಲ್ವೆ ಆರೋಗ್ಯ ಸಿಬ್ಬಂದಿಗಳು  ಜ್ವರ ಇದೆಯೇ ಎಂದು ಪರೀಕ್ಷಿಸಿದ  ನಂತರವೇ ಪ್ರಯಾಣಿಕರನ್ನು ಸಂಪೂರ್ಣ ಸ್ಯಾನಿಟೈಜರ್ ಯುಕ್ತ ರೈಲನ್ನು  ಹತ್ತಲು ಅನುಮತಿ ನೀಡಿದರು.  ಪ್ರಯಾಣಿಕರಿಗೆ ಪ್ರಯಾಣದುದ್ದಕ್ಕೂ ವೈಯುಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು   ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ತಿಳಿಸಲಾಯಿತು.

ರೈಲ್ವೆಯ ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ತೆರಳಿದ್ದಾರೆ.  ಭಾರತೀಯ ರೈಲ್ವೆ  ಮತ್ತು  ಪ್ರವಾಸೋದ್ಯಮ ನಿಗಮ ವತಿಯಿಂದ  ವಿವಿಧ ಪೂರ್ವ ನಿರ್ಧಾರಿತ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆಹಾರವನ್ನು  ಒದಗಿಸಲಿದೆ.

ನಿನ್ನೆ ಸಂಜೆ ಹಾಸನದಿಂದ   ಮತ್ತೊಂದು ಶ್ರಮಿಕ್  ವಿಶೇಷ ರೈಲು ಬಿಹಾರ್ ನ  ಕತಿಹಾರ್‌ಗೆ  ಪಯಣಿಸಿದ್ದು   1440 ಪ್ರಯಾಣಿಕರನ್ನು ಹೊತ್ತೊಯ್ದಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ  ತಿಳಿಸಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: