ಮೈಸೂರು

ಸೈಕಲ್ ಸವಾರನಿಗೆ ಗುದ್ದಿದ ಅಪರಿಚಿತ ವಾಹನ : ಸವಾರ ಸಾವು

ದಿನಪತ್ರಿಕೆಗಳನ್ನು ಮನೆಮನೆಗೆ ಹಾಕಲು ಸೈಕಲ್ ಮೇಲೆ ತೆರಳುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಮುಂಜಾನೆ ಮೈಸೂರಿನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು  ಲಷ್ಕರ್ ಮೊಹಲ್ಲಾ ನಿವಾಸಿ ಚಂದ್ರು ಅಲಿಯಾಸ್ ಚಂದ್ರಶೇಖರ್ (61) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ಮನೆಮನೆಗೆ ಹಾಕಲು ಕೆ.ಆರ್.ವೃತ್ತದಿಂದ ದಿನಪತ್ರಿಕೆಗಳನ್ನು ಸೈಕಲ್ ಮೂಲಕ ಕೆ.ಟಿ.ಸ್ಟ್ರೀಟ್ ಕಡೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಅವರ ಸೈಕಲ್ ಗೆ ಗುದ್ದಿದ್ದು, ಅವರು ನೆಲಕ್ಕುರುಳಿದ ಪರಿಣಾಮ ತಲೆಗೆ ಏಟಾಗಿ ತೀವ್ರ ರಕ್ತಸ್ರಾವವುಂಟಾಗಿ  ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದೆ.

ಹತ್ತಿರದಲ್ಲಿಯೇ ಅಳವಡಿಸಲಾದ ಸಿಸಿಕ್ಯಾಮರಾ ಫೂಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: