ಮೈಸೂರು

ಮಾಜಿ‌ ಪ್ರಧಾನಿ ಹೆಚ್.ಡಿ.ದೇವೇಗೌಡ ಜನ್ಮದಿನ ಪ್ರಯುಕ್ತ ಪೌರಕಾರ್ಮಿಕರಿಗೆ ಕಿಟ್ ವಿತರಿಸಿದ ಸಹೋದರಿ ಹೆಚ್ ಡಿ ಪುಟ್ಟಮ್ಮ

ಮೈಸೂರು,ಮೇ.18:- ಇಂದು ಮಾಜಿ‌ ಪ್ರಧಾನಿ ಹೆಚ್.ಡಿ.ದೇವೇಗೌಡರ 87 ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಹೆಚ್.ಡಿ.ದೇವೇಗೌಡರ ಸಹೋದರಿ ಹೆಚ್ ಡಿ ಪುಟ್ಟಮ್ಮ ಅವರು ದಿನಸಿ ಕಿಟ್ ವಿತರಿಸಿದರು.

ವಿಜಯನಗರದ ತಮ್ಮ ನಿವಾಸದ ಎದುರು ಇಂದು ವಿಜಯನಗರದ ವ್ಯಾಪ್ತಿಯ ಪೌರಕಾರ್ಮಿಕರಿಗೆ  ಪ್ರತಿನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನೊಳಗೊಂಡ ದಿನಸಿ ಕಿಟ್ ವಿತರಿಸಿದರು.

ಪುಟ್ಟಮ್ಮನವರಿಗೆ ಅವರ ಮಗ ಹರ್ಷ ದೇವೇಗೌಡ ಮತ್ತು ಕುಟಂಬ ಸಾಥ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: