ಮೈಸೂರು

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರವರ ಜನ್ಮ ದಿನದ ಪ್ರಯುಕ್ತ ರೇಷ್ಮೆ ಪಂಚೆಶಲ್ಯ ವಿತರಿಸುವ ಮೂಲಕ ಸ್ವದೇಶಿ ವಸ್ತುಗಳ ಬಳಕೆಯ ಕುರಿತು ಅರಿವು

ಮೈಸೂರು,ಮೇ.18:- ಭಾರತದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರವರ 88ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಚಾಮುಂಡಿಪುರಂ ಬಡಾವಣೆಯಲ್ಲಿ ಅರಿವು ಸಂಸ್ಥೆಯ ವತಿಯಿಂದ ನೂರಕ್ಕೂ ಹೆಚ್ಚು ನಾಗರೀಕರಿಗೆ  ರೇಷ್ಮೆ ಪಂಚೆಶಲ್ಯ ವಿತರಿಸುವ ಮೂಲಕ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು,

ಯುವಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಭಾರತದ 11ನೇ ಪ್ರಧಾನಿಯಾಗಿ ದೆಹಲಿಯ ಕೆಂಪುಕೋಟೆಯಲ್ಲಿ  ಕನ್ನಡದ ಕಂಪನ್ನು ಬೀರಿದ ಕೆಚ್ಚೆದೆಯ ಏಕೈಕ ಕನ್ನಡ ಸಂಸದರು ಅವರೇ ಹೆಚ್.ಡಿ ದೇವೇಗೌಡರು ಎನ್ನುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ಕರ್ನಾಟಕದ ನೆಲ, ಜಲ, ಭಾಷೆ ವಿಚಾರವಾಗಿ ವಿವಾದವಾದಾಗ, ತೊಂದರೆ ಬಂದಾಗ ಹೆಚ್.ಡಿ ದೇವೆಗೌಡರು ನೇತೃತ್ವವಹಿಸಿ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ,

ನಮ್ಮ ಭಾರತೀಯರ ಸಾಂಸ್ಕೃತಿಕ ಉಡುಪಾದ ಪಂಚೆಶಲ್ಯವನ್ನು ಧರಿಸಿ ಸಾಮಾನ್ಯ ನಾಗರೀಕನೂ ಸಹ ವಿಮಾನ ನಿಲ್ದಾಣದಿಂದ ಪಾರ್ಲಿಮೆಂಟ್ ಭವನ ಅಂತರರಾಷ್ಟ್ರೀಯ ಕ್ಲಬ್ ಹೋಟೆಲ್ ಗಳವರೆಗೂ ಓಡಾಡಲು ಪ್ರವೇಶವಿದೆ ಎಂದು ಅವಕಾಶ ಕಲ್ಪಿಸಿದ ಜನಪ್ರಿಯತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಸಲ್ಲುತ್ತದೆ,

ಹಾಗಾಗಿ ಇದನ್ನು ಮನಗಂಡು ಕೊರೋನಾ‌ ಸೋಂಕಿನಿಂದ ಲಾಕ್ ಡೌನ್ ಆಗಿರುವ ನಿಟ್ಟಿನಲ್ಲಿ ತೊಂದರೆಯಲ್ಲಿರುವ ಬಡವರಿಗೆ ಪಂಚೆಶಲ್ಯ ಬಟ್ಟೆಗಳನ್ನು ವಿತರಿಸಿ ಸಹಾಯ ಮಾಡುವ ಮೂಲಕ ಅರಿವು ಸಂಸ್ಥೆಯ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ, ಹಳೇಮೈಸೂರಿನ ಪಾರಂಪರಿಕ ಆಹಾರ ರಾಗಿಮುದ್ದೆಯನ್ನು ಸಹ ದೆಹಲಿಗೆ ಪರಿಚಯಿಸಿ ರಾಗಿಮುದ್ದೆ ಆಹಾರ ಮಹತ್ವ ತಿಳಿಸಿದ ಗೌಡರು  ಪ್ರವಾಸಿಗರು  ರಾಗಿಮುದ್ದೆ ಊಟಕ್ಕೆ ಹೆಚ್ಚಾಗಿ ಪ್ರೋತ್ಸಾಹಿಸಿದ್ದಾರೆ. ಇಂದು ಅನೇಕ ಕಡೆ ರಾಗಿ ಮುದ್ದೆಯ ತಯಾರಿಕಾ ಘಟಕ ಸಹ ನಿರ್ಮಾಣವಾಗಿದೆ, ಮೂಲತಃ ರೈತಾಪಿ ಕುಟುಂಬದಿಂದ ಬಂದು ಪ್ರಧಾನಿಯಾದರೂ ಸಹ ಮಣ್ಣಿನ ಮಗನಾಗಿ ಕೃಷಿಪ್ರಧಾನ ಯೋಜನೆಗಳು ಸೇರಿದಂತೆ ದೇಶದ ಆರ್ಥಿಕ ಪರಿಸ್ಥಿತಿ ನಿರ್ವಹಣೆ, ವಿದೇಶದಿಂದ ಬಂಡವಾಳ ಹೂಡಿಕೆ ತರುವಿಕೆ, ನದಿ ವನ್ಯ ಸಂರಕ್ಷಣೆ, ಸಹಸ್ರಾರು ನಾಯಕರನ್ನು ರಾಜಕೀಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಸಿ ಅನ್ಯ ನಾಯಕರಿಗೆ ಮಾದರಿಯಾಗಿದ್ದಾರೆ  ಎಂದರು.

ಹೆಚ್.ಡಿ ದೇವೇಗೌಡರ ಹುಟ್ಟುಹಬ್ಬ ಆಚರಣೆಯ ಅಂಗವಾಗಿ ರೇಷ್ಮೆ ಪಂಚೆ ಶಲ್ಯ ವಿತರಣೆ ಕಾರ್ಯಕ್ರಮದಲ್ಲಿ ಯುವ ಮುಖಂಡ ಅಜಯ್ ಶಾಸ್ತ್ರಿ, ಉದ್ಯಮಿ ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಜೆಡಿಎಸ್ ನಗರ ಯುವ ಕಾರ್ಯಾಧ್ಯಕ್ಷ ಪ್ರಶಾಂತ್ ಪಚ್ಚಿ, ಉಪಾಧ್ಯಕ್ಷ ಯದುನಂದನ್, ಜೆಡಿಎಸ್ ಕೃಷ್ಣರಾಜ ಯುವ ಅಧ್ಯಕ್ಷ ಬಿಇ. ಗಿರೀಶ್ ಗೌಡ, ಚಕ್ರಪಾಣಿ, ಹರೀಶ್, ಪ್ರದೀಪ್, ಅಭಿಷೇಕ್, ತೇಜಸ್, ಸುಬ್ಬಣ್ಣ, ರಾಮಚಂದ್ರ ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: