ಕ್ರೀಡೆಮನರಂಜನೆ

ತಮ್ಮ ಜೀವನಚರಿತ್ರೆಯಲ್ಲಿ ನಟಿಸಲು ಸಿದ್ಧ ಎಂದ ಕ್ರಿಕೆಟಿಗ ವಿರಾಟ್ ಕೊಯ್ಲಿ : ಷರತ್ ಏನು ಗೊತ್ತಾ?

ದೇಶ(ನವದೆಹಲಿ)ಮೇ.19:- ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ  ಬಯೋಪಿಕ್ ನಲ್ಲಿ ನಟಿಸಲು ಸಿದ್ಧರಾಗಿದ್ದಾರೆ, ಆದರೆ ಅವರು  ಒಂದು ಷರತ್ ನ್ನು ಸಹ ಹಾಕಿದ್ದಾರೆ.

ವಿರಾಟ್ ಕೊಹ್ಲಿ ಪ್ರಕಾರ, ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ತಮ್ಮ ಹೆಂಡತಿಯಾಗಿ ನಟಿಸಿದರೆ, ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುತ್ತಾರಂತೆ. ವಿರಾಟ್ ಕೊಹ್ಲಿ ಅವರು ಫುಟ್ಬಾಲ್ ಆಟಗಾರ ಸುನಿಲ್ ಛತ್ರಿ ಅವರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಚಾಟ್ನಲ್ಲಿ ಹೇಳಿದ್ದಾರೆ. ಇಬ್ಬರು ಆಟಗಾರರ ನಡುವೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಇಂದು ನಾನು ಯಾವ ರೀತಿ ವ್ಯಕ್ತಿಯಾಗಿದ್ದೆನೆಯೋ ಅದಕ್ಕೆ ಕಾರಣ ಅನುಷ್ಕಾ. ನನ್ನನ್ನು ಬದಲಾಯಿಸುವಲ್ಲಿ ಅನುಷ್ಕಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ.

‘ಇಂದು ನಾನು ನಾನಾಗಿರಲು  ಅನುಷ್ಕಾ ಕಾರಣ. ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಇದು ನನಗೆ ಜೀವನದಲ್ಲಿ ವಿಶ್ವಾಸವನ್ನು ತಂದಿದೆ. ವೃತ್ತಿಜೀವನದಲ್ಲಿಯೂ ಸಹಕಾರಿಯಾಗಿದೆ.   ಯಾರಾದರೂ ತೊಂದರೆಯಲ್ಲಿದ್ದರೆ ಮತ್ತು ನನ್ನ ಸಹಾಯವನ್ನು ಕೇಳಿದರೆ, ನಾನು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ. ಇದು ದೊಡ್ಡ ಬದಲಾವಣೆ ಎಂದಿದ್ದಾರೆ.    (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: