ಮೈಸೂರು

ಇಂದಿನಿಂದ ಹೇರ್ ಕಟ್ಟಿಂಗ್ ಶಾಪ್‍, ಬ್ಯೂಟಿಪಾರ್ಲರ್‍ ಓಪನ್ : ಮೈಸೂರಿನಲ್ಲೂ ಓಪನ್ ಆದ ಸೆಲೂನ್ ಶಾಪ್

ಮೈಸೂರು,ಮೇ.19:- ಇಂದಿನಿಂದ ಹೇರ್ ಕಟ್ಟಿಂಗ್ ಶಾಪ್‍, ಬ್ಯೂಟಿಪಾರ್ಲರ್‍ ಗಳು ತೆರೆದಿವೆ. ಈ ಮೊದಲು ಕಳೆದೆರಡು ತಿಂಗಳಿನಿಂದ ಲಾಕಡ್ ಡೌನ್ ಹಿನ್ನೆಲೆಯಲ್ಲಿ ತೆರೆಯಲು ಅವಕಾಶವಿರಲಿಲ್ಲ.

ಕೊರೋನಾ ಲಾಕ್ಡೌನ್ನಿಂದ ಕ್ಷೌರಿಕರು ಕಂಗಾಲಾಗಿದ್ದರು. ಎರಡು ತಿಂಗಳ ನಂತರ ಎಂದಿನಂತೆ ಸೆಲೂನ್ ಗಳು ಓಪನ್ ಆಗಿವೆ. ಸೆಲೂನ್ ಗಳಲ್ಲೂ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲಾಗಿದೆ. ಗ್ರಾಹಕರನ್ನು ಮುಟ್ಟಿದ ನಂತರ ಕಣ್ಣು, ಮೂಗು, ಬಾಯಿ ಮುಟ್ಟದೆ ಜಾಗ್ರತೆಯಿಂದ ಕೆಲಸ ಮಾಡಲಾಗುತ್ತಿದ್ದು, ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಸೆಲೂನ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಹಕರಿಗಾಗಿ ಸ್ಯಾನಿಟೈಸರ್, ಯೂಸ್ ಅಂಡ್ ಥ್ರೋ ಕ್ಲಾಥ್ ಬಳಕೆ ಮಾಡಲಾಗುತ್ತಿದೆ. ಗ್ರಾಹಕರಿಗೆ ಬಟ್ಟೆಯನ್ನು ಮುಟ್ಟುವ ಮೊದಲು ಸ್ಯಾನಿಟೈಸರ್ ಬಳಸಲು ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನಾದ್ಯಂತ ಸೆಲೂನ್ ಶಾಪ್ ಗಳು ತೆರೆದಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: