ಮೈಸೂರು

ಪ್ರಭ ಬೆಳವಂಗಲ ಮಾಡಿರುವ ಅವಹೇಳನಕಾರಿ ಪೋಸ್ಟ್ ಶಿಕ್ಷಾರ್ಹ: ಸಿಎಂ ಸಿದ್ದರಾಮಯ್ಯ ಕ್ರಮಕೈಗೊಳ್ಳುವಂತೆ ಪ್ರತಾಪ್ ಸಿಂಹ ಒತ್ತಾಯ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಭ ಬೆಳವಂಗಲ ಅವರು ಮಾಡಿರುವ ಅವಹೇಳನಕಾರಿ ಪೋಸ್ಟ್ ಖಂಡನಾರ್ಹ ಹಾಗೂ ಶಿಕ್ಷಾರ್ಹವಾಗಿದ್ದು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕು ಎಂದು ಸಂಸದ ಪ್ರತಾಪಸಿಂಹ ಒತ್ತಾಯಿಸಿದರು.

ಮಂಗಳವಾರ  ಮೈಸೂರಿನ ಜಲದರ್ಶಿನಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪರ ಮಾತನಾಡುವ ಪ್ರಭ ಬೆಳವಂಗಲ ಅವರು ಓರ್ವ ಸನ್ಯಾಸಿನಿ ಮಹಿಳೆಯೊಂದಿಗಿರುವ ವೀಡಿಯೋಗೆ ಯೋಗಿ ಆದಿತ್ಯನಾಥ್ ಅವರ ಮುಖ ಹಾಕಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಇದು ಖಂಡನಾರ್ಹವಾಗಿದ್ದು ಅವರ ವಿರುದ್ಧ ರಾಜ್ಯದ ಎಲ್ಲಾ ಠಾಣೆಗಳಲ್ಲು ಸೆಕ್ಷನ್ 67, 153ಎ, 499, 500 ಮತ್ತು 505ರ ಅಡಿಯಲ್ಲಿ ಚಾರಿತ್ರ್ಯವಧೆ, ಸಮಾಜದ ಶಾಂತಿ ಕದಡುವ ಯತ್ನ, ಫೋಟೋ ಮಾರ್ಪ್ ಮಾಡಿರುವ ಆರೋಪದಡಿ ಪ್ರಕರಣ ದಾಖಲಿಸಲಾಗುವುದು. ಈ ಸಂಬಂಧ ಮಂಗಳವಾರ ಯುವಮೋರ್ಚಾ ವತಿಯಿಂದ ಸುಮಾರು 100ರಿಂದ 150 ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ತಮ್ಮ ಹಾಗೂ ತಮ್ಮವರ ವಿರುದ್ಧ ಮಾತನಾಡಿದರೆ ಜೈಲಿಗೆ ಕಳುಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗಿಂತಲೂ ಹೆಚ್ಚು ಜನಬೆಂಬಲ ಪಡೆದು ಮುಖ್ಯಮಂತ್ರಿಯಾಗಿರುವ ಆದಿತ್ಯನಾಥ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಪ್ರಭ ಅವರನ್ನು ಬಂಧಿಸಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು. ಒಂದು ವೇಳೆ ಗಂಭೀರವಾಗಿ ಪರಿಗಣಿಸದೆ, ರಾಜಧರ್ಮವನ್ನು ಪಾಲಿಸದಿದ್ದರೆ ಬೇರೆ ರಾಜ್ಯಗಳಲ್ಲೂ ಪ್ರಕರಣ ದಾಖಲಿಸಲಾಗುವುದು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಕೋರ್ಟ್ ಆದೇಶ ಪಡೆದುಕೊಂಡು ಬಂಧಿಸಲಾಗುವುದು ಎಂದು ಹೇಳಿದರು.

ಸ್ವಅನುಭವ ಪಡೆದುಕೊಳ್ಳಬೇಕು: ಪ್ರಭ ಬೆಳವಂಗಲ ಅವರಿಗೆ ಪೋರ್ನ್ ವೀಡಿಯೋ ನೋಡುವ ಕಯಾಲಿ ಇದ್ದರೆ ಉತ್ತರಪ್ರದೇಶದವರೆಗೂ ಹೋಗಬೇಕಿಲ್ಲ. ಬಾಗಲಕೋಟೆಯ ಮೇಟಿ ಅವರ ಛೇಂಬರ್‍ಗೆ ಹೋದರೆ ನೇರವಾಗಿ ನೋಡಬಹುದು. ಇನ್ನೂ ಆಸೆ ಇದ್ದರೆ ಸ್ವಅನುಭವವನ್ನೂ ಪಡೆದುಕೊಳ್ಳಬಹುದು. ಜನಪ್ರನಿದಿಗಳ ಛೇಂಬರ್‍ನಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅವರಿಗಿದೆ. ಅಲ್ಲದೆ ಅವರು ಅವಹೇಳನಕಾರಿ ಪೋಸ್ಟ್ ಮಾಡುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮಹಿಳಾಪರ ಸಂಘಟನೆಗಳಿಗೆ ನಿಜವಾದ ಸಂವೇದನೆ ಇದ್ದರೆ ಮೊದಲು ವೀಡಿಯೋದಲ್ಲಿರುವ ಮಹಿಳೆಯ ಪರ ಧ್ವನಿ ಎತ್ತಲಿ ಎಂದು ಹೇಳಿದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: