
ಮೈಸೂರು
ಫೈವ್ ಸ್ಟಾರ್ ಗಾರ್ಬೇಜ್ ಫ್ರೀ ಸಿಟಿಯಾಗಿ ಗುರುತಿಸಿಕೊಂಡ ಮೈಸೂರು ನಗರಿ
ಮೈಸೂರು,ಮೇ.19:- ಕೊರೋನಾ ವೈರಸ್ ಮಹಾಮಾರಿಯಿಂದ ಕಂಗೆಟ್ಟು ಇದೀಗ ಚೇತರಿಸಿಕೊಂಡಿರುವ ನಡುವೆಯೇ ಮೈಸೂರು ಜನತೆಗೆ ಸಿಹಿ ಸುದ್ದಿಯೊಂದು ಲಭಿಸಿದೆ.
ಮಲ್ಲಿಗೆ ನಗರಿ ಮೈಸೂರು ಈಗ ತ್ಯಾಜ್ಯಮುಕ್ತ ನಗರವಾಗಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಮೈಸೂರನ್ನು ಫೈವ್ ಸ್ಟಾರ್ ಗಾರ್ಬೇಜ್ ಫ್ರೀ ಸಿಟಿಯಾಗಿ ನಾಲ್ಕನೇ ಸ್ಥಾನದಲ್ಲಿ ಮೈಸೂರನ್ನು ಘೋಷಿಸಿದೆ.
ದೇಶದಲ್ಲಿ ಕೇವಲ 6ನಗರಗಳನ್ನು ಮಾತ್ರ ಫೈವ್ ಸ್ಟಾರ್ ಗಾರ್ಬೇಜ್ ಫ್ರೀ ಸಿಟಿ ಎಂದು ಘೋಷಣೆ ಮಾಡಲಾಗಿದ್ದು, ಈ ಬಗ್ಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಮೈಸೂರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದೆ.
ಮೊದಲ ಸ್ಥಾನ ಛತ್ತೀಸ್ ಗಢದ ಅಂಬಿಕಾಪುರ, ಎರಡನೇ ಸ್ಥಾನ ಗುಜರಾತ್ ನ ರಾಜ್ ಕೋಟ್, ಮೂರನೇ ಸ್ಥಾನ ಗುಜರಾತ್ ನ ಸೂರತ್, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕದ ಮೈಸೂರು, ಐದನೇ ಸ್ಥಾನದಲ್ಲಿ ಮಧ್ಯಪ್ರದೇಶದ ಇಂಧೋರ್ , ಆರನೇ ಸ್ಥಾನದಲ್ಲಿ ಮಹಾರಾಷ್ಟ್ರದ ನವಿ ಮುಂಬೈ ಗುರುತಿಸಿಕೊಂಡಿವೆ. (ಕೆ.ಎಸ್,ಎಸ್.ಎಚ್)